ಅಣ್ಣಿಗೇರಿ: ಅಣ್ಣಿಗೇರಿ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ವತಿಯಿಂದ 2021-22ನೇ ಸಾಲಿನಲ್ಲಿ ಅರ್ಜಿಗಳನ್ನು ಭರ್ತಿ ಮಾಡಿದ ರೈತರಿಗೆ ರೈತ ಸಂಪರ್ಕ ಕೇಂದ್ರದಲ್ಲಿ ಶೇಕಡಾ 90 ರಷ್ಟು ರಿಯಾಯಿತಿಯಲ್ಲಿ ಕೃಷಿಗೆ ಅನುಕೂಲವಾಗಲೆಂದು ತುಂತುರು ಯೋಜನೆಯ ಅಡಿಯಲ್ಲಿ 30 ಪೈಪ್, 5 ಜಟ್‌ಗಳನ್ನು ವಿತರಿಸಲಾಯಿತು.
ಈ ವೇಳೆ ಕೃಷಿ ಅಧಿಕಾರಿ ಕೃಷ್ಣ ಗೌಡ ಪಾಟೀಲ್ ಅವರು ಮಾತನಾಡಿ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಕೃಷಿ ಇಲಾಖೆ ಮೂಲಕ ನೊಂದನಿ ಮಾಡಿಕೊಂಡು ತಮ್ಮ ಜಮೀನುಗಳಿಗೆ ಬೇಕಾದ ಕೃಷಿ ಸಲಕರಣೆಗಳು ಬೇಸಾಯಕ್ಕೆ ಬೇಕಾಗುವ ಬೀಜಗಳು ಸಕಾಲದಲ್ಲಿ ಪಡೆದು ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ನಂದೀಶ, ಪಬ್ಲಿಕ್ ನೆಕ್ಸ್ಟ್, ಅಣ್ಣಿಗೇರಿ
Kshetra Samachara
21/04/2022 08:29 pm