ನವಲಗುಂದ : ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ರೈತರ ಬಾಳಲ್ಲಿ ವರದಾನವಾದ ಕೃಷಿಹೊಂಡ ನಿರ್ಮಾಣ ಕಾರ್ಯಕ್ಕೆ ಅದೆಷ್ಟೋ ಯುವ ರೈತರು ಮನಸ್ಸು ಮಾಡಿ ಕೃಷಿ ಕಾಯಕದಲ್ಲಿ ಸಾಧನೆ ಮಾಡಲು ಹಂಬಲಿಸುತ್ತಿದ್ದಾರೆ.
ಅಂತಹ ಉತ್ಸಾಹಿ ರೈತರ ಪೈಕಿ ನವಲಗುಂದ ತಾಲೂಕಿನ ಇಬ್ರಾಹಿಂಪುರದ ಯುವ ರೈತ, ವಿಶ್ವನಾಥ ಮಾಸ್ತಿಯವರ ಜೊತೆ ಕೃಷಿಹೊಂಡ ನಿರ್ಮಿಸಿಕೊಳ್ಳುವ ಕಾರಣವೇನು ? ಕೃಷಿಹೊಂಡ ನಿರ್ಮಾಣದ ಬಳಿಕ ಯಾವ ಬದಲಾವಣೆ ಆಗಲಿದೆ ? ಎಂಬ ವಿಷಯದ ಕುರಿತು ಪಬ್ಲಿಕ್ ನೆಕ್ಸ್ಟ್ ನಡೆಸಿದ ಚಿಟ್ ಚಾಟ್ ಇಲ್ಲಿದೆ ನೋಡಿ.
ತಮ್ಮ 20 ಎಕರೆ ಜಮೀನಿನಲ್ಲಿ 100*100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಒಣ ಬೇಸಾಯದ ಮಾರ್ಗದ ಕೃಷಿ ಕಾಯಕ ಬಿಟ್ಟು ಕೃಷಿಹೊಂಡ ಆಶ್ರಿತ ಬೇಸಾಯದ ಬದುಕಿಗೆ ಸೈ ಎನ್ನಲು ರೈತ ವಿಶ್ವನಾಥ ಮನಸ್ಸು ಮಾಡಿದ್ದಾರೆ.
Kshetra Samachara
27/03/2022 07:12 pm