ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಆಧುನಿಕ ಬೇಸಾಯಕ್ಕೆ ಕೃಷಿಹೊಂಡ ವಾರ್ಷಿಕ ಲಕ್ಷ ಲಕ್ಷ ಆದಾಯ

ಅಣ್ಣಿಗೇರಿ: ಇಲ್ಲೊಬ್ಬ ರೈತ ಕಳೆದ ನಾಲ್ಕು ವರ್ಷದ ಕೃಷಿಹೊಂಡ ಆಶ್ರಿತ ಕೃಷಿ ಕಾಯಕದಲ್ಲಿ ಪ್ರತಿ ವರ್ಷ ವಾರ್ಷಿಕ 4 ಲಕ್ಷ ಆದಾಯ ಕಂಡಿದ್ದಾನೆ, ಅದರಂತೆ ವಿಧ ವಿಧ ಬೆಳೆ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾನೆ.

ಪ್ರಗತಿಪರ ರೈತರಾಗಿ ಗುರುತಿಸಿಕೊಂಡಿರುವ ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ರೈತ ಮಹೇಶ್ ಬಳ್ಳೂಳ್ಳಿ, ತಮ್ಮ 5 ಎಕರೆ ಭೂಮಿಗೆ ಹೊಂದಿಕೊಂಡು ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 7070 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಮುಂಗಾರು ಮೆಣಸಿನಕಾಯಿ, ಈರುಳ್ಳಿ, ಶೇಂಗಾ, ಹೆಸರು ಬೆಳೆಯ ಉತ್ತಮ ಲಾಭದ ಜೊತೆ ಹಿಂಗಾರು ಕಡಲೆ, ಗೋಧಿ, ನೀರಾವರಿ ಸಂದಕಾ ಗೋಧಿ ಸಹ ಬೆಳೆದು ಆದಾಯ ಹೊಸ್ತಿಲಲ್ಲಿದ್ದಾರೆ.

ಕೇವಲ ಉತ್ತಮ ಬೆಳೆಗೆ ಕೃಷಿಹೊಂಡದ ಕೊಡುಗೆ ಅಷ್ಟೇ ಅಲ್ಲದೆ, ಕೃಷಿಹೊಂಡ ಹೂಳೆತ್ತುವ ಯೋಜನೆ, ಯಾವ ಬೆಳೆಗೆ? ಯಾವ ಮಣ್ಣು ? ಸೂಕ್ತ ಎಂಬ ಮಾಹಿತಿ ಜೊತೆ ಜೊತೆ ರೈತರಿಗೆ ಮಣ್ಣು ಪರೀಕ್ಷೆ ಕೈಗೊಳ್ಳಲು ದೇಶಪಾಂಡೆ ಫೌಂಡೇಶನ್ ಬೆನ್ನೆಲುಬಾಗಿದೆ.

ಒಟ್ಟಾರೆ ಕೃಷಿಹೊಂಡದಂತಹ ಆಧುನಿಕತೆ ಹೊಳಪನ್ನು ರೈತರಿಗೆ ನೀಡಿ, ಮಹೇಶ್ ಬಳ್ಳೂಳ್ಳಿ ಅವರಂತಹ ರೈತರ ಬಾಳಲ್ಲಿ ದೇಶಪಾಂಡೆ ಫೌಂಡೇಶನ್ ಮಹತ್ತರ ಕೊಡುಗೆ ನೀಡಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/03/2022 06:57 pm

Cinque Terre

236.2 K

Cinque Terre

1

ಸಂಬಂಧಿತ ಸುದ್ದಿ