ರೈತ ದುಡಿತಾನ ಜೀವ ಸವೆಸಿ
ಸೃಷ್ಟಿ ಎಂಬ ಚೆಲುವಿ ನಕ್ಕಾಳ ಪನ್ನೀರ ಹರಿಸಿ
ಹಸಿ ಉಂಡು ಬೆಳದೈತಿ ಸಿರಿ ಹಸಿರ ರಾಶಿ
ಕಬ್ಬಕ್ಕಿ ಕುಣಿತಾವ ಮೈ ಚಳಿಯ ಬಿಡಿಸಿ
ನೆಲ ಹಿಡಿದು ದುಡಿದವರು ಊರಿಗೆ ಮಹರಾಜರು. ಇನ್ನೊಬ್ಬರ ಹಸಿವು ನೀಗಿಸಿದವರು ವಾಸ್ತವದಲ್ಲಿ ಪುಣ್ಯಾತ್ಮರು. ತಾನು ಬೆಳೆದ ಅನ್ನವನ್ನು ಅದ್ಯಾರೋ, ಅದೆಲ್ಲೋ ಕುಳಿತು ತೃಪ್ತರಾಗಿ ಊಟ ಮಾಡ್ತಾರೆ. ಆದ್ರೆ ಅವರೆಲ್ಲ ಯಾರು ಎಂಬುದು ರೈತನಿಗೆ ಗೊತ್ತಾಗೋದೇ ಇಲ್ಲ. ಹೀಗಾಗಿ ವ್ಯವಸಾಯ ಎಂಬುದು ನಿಸ್ವಾರ್ಥ ಕಾಯಕ.
ಸದ್ಯ ನೀವು ನೋಡ್ತಾ ಇರುವ ಈ ಅನ್ನದಾತ ನವಲಗುಂದ ತಾಲೂಕು ನಾವಳ್ಳಿ ಗ್ರಾಮದವರು. ಸೈನಿಕರಾಗಿ ದೇಶ ಸೇವೆ ಮಾಡಿ ನಿವೃತ್ತಿಯಾಗಿ ಊರಿಗೆ ಬಂದಿದ್ದಾರೆ. ಗಡಿಯಲ್ಲಿ ದೇಶ ಸೇವೆ ಮಾಡಿದ ಇವರು ಈಗ ರೈತನಾಗಿ ಇನ್ನೊಬ್ಬರ ಹಸಿವು ನೀಗಿಸುವ ಕೆಲಸ ಮಾಡ್ತಿದ್ದಾರೆ. ಬನ್ನಿ...ರೈತ cum ಮಾಜಿ ಸೈನಿಕ ಮಲ್ಲಿಕಾರ್ಜುನ ಅವರೊಂದಿಗೆ ಮನಸಿನ ಮಾತುಕತೆ ನಡೆಸೋಣ.
Kshetra Samachara
15/12/2021 11:55 am