ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಒಣ ಬೇಸಾಯದ ಭೂಮಿಯಲ್ಲೀಗ ಕೃಷಿ ಕಾರಂಜಿ, ರೈತರ ಬಾಳೆಲ್ಲಾ ಅಪರಂಜಿ

ನವಲಗುಂದ : ಒಣ ಬೇಸಾಯದಲ್ಲಿ ನೆಲದಲ್ಲಿ ಸಿಲುಕಿ ಅತ್ತ ಆರಕ್ಕೆ ಎರದ, ಇತ್ತ ಮೂರಕ್ಕೆ ಇಳಿಯದ ರೈತರ ಕೃಷಿ ಆದಾಯದ ಬದಕಲ್ಲೀಗ ಗಂಗಮಾತೆ ಸಂತಸದ ಚಿಲುಮೆ ತುಂಬಿದ್ದಾಳೆ. ಪ್ರತಿ ಮಣ್ಣಿನ ಕಣದಲ್ಲೂ ಹಸಿರ ಬಗ್ಗೆ ಚಿಮ್ಮಿಸಿ ರೈತಾಪಿ ಕುಲಕ್ಕೆ ಸುಗ್ಗಿ ಹಿಗ್ಗು ತಂದಿದ್ದಾಳೆ.

ಇದೇ ನವಲಗುಂದ ತಾಲೂಕಿನ ಸೊಟಕನಹಾಳ ಗ್ರಾಮದ ರೈತರು, ತಮ್ಮ ಜಮೀನಿನಲ್ಲಿ ಒಣ ಬೇಸಾಯದ ಭೂಮಿಯಲ್ಲಿ ಮೈ ಹಣ್ಣಾಗುವರೆಗೂ ದುಡಿದರೂ ಏಕರೆ ಹೊಲದಲ್ಲಿ ಹತ್ತು ಸಾವಿರ ರೂಪಾಯಿ ಆದಾಯ ಗಳಿಸುವ ಕಷ್ಟದ ದಿನಗಳಿಗೆ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ರೈತರ ಜಮೀನಲ್ಲಿ ನಿರ್ಮಾಣವಾದ ಕೃಷಿಹೊಂಡ ಬರೋಬ್ಬರಿ ಏಕರೆ 30 ಸಾವಿರ ಆದಾಯ ಎತ್ತರದ ಮಟ್ಟಕ್ಕೆ ರೈತರನ್ನು ತಂದು ನಿಲ್ಲಿಸಿ ಆರ್ಥಿಕವಾಗಿ ಸದೃಡರನ್ನಾಗಿ ಮಾಡಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಸೊಟಕಿನಹಾಳ ಗ್ರಾಮದ ರೈತ ಶ್ರೀನಿವಾಸ್ ನಿಂಗರಡ್ಡಿ ದೇವರಡ್ಡಿ ತಮ್ಮ 20 ಎಕರೆ ಹೊಲದಲ್ಲಿ ವಿಧ ವಿಧದ ಕೃಷಿ ಪ್ರಯೋಗ ಕೈಗೊಂಡು ಮುಂಗಾರು 45 ಕ್ವಿಂಟಾಲ್ ಹೆಸರು ಇಳುವರಿ ಜೊತೆಗೆ ಗೋವಿನಜೋಳ, ಈರುಳ್ಳಿ, ಸೂರ್ಯಕಾಂತಿ ಬೆಳೆ ಬೆಳೆದು ವಾರ್ಷಿಕ 20 ಏಕರೆ ಹೊಲದಲ್ಲಿ 15 ಲಕ್ಷ ಆದಾಯದ ಬದುಕಿನ ಮಾರ್ಗ ಕಂಡುಕೊಂಡು ಸಂತಸದಲ್ಲಿದ್ದಾರೆ.

ಈಗಾಗಲೇ ತಮ್ಮ 20 ಎಕರೆ ಜಮೀನಲ್ಲಿ 160/160 ಸುತ್ತಳತೆಯ ಕೃಷಿಹೊಂಡ ನಿರ್ಮಾಣದ ಜೊತೆ ಅಗತ್ಯ ಸಮಯದಲ್ಲಿ ಕೃಷಿ ಕಾಯಕ ಕೈಗೊಂಡು ಶ್ರೀನಿವಾಸ್ ನಿಂಗರೆಡ್ಡಿ, ಕೃಷಿಯಲ್ಲೇ ಹೊಸ ಕನಸು ಕಂಡು ಅದನ್ನು ಸಾಕಾರ ಮಾಡಿಕೊಂಡಿದ್ದಲ್ಲದೇ ತನ್ನಂತೆ ಇತರ ರೈತರಿಗೂ ಕೃಷಿಹೊಂಡ ನಿರ್ಮಾಣದ ಮಹತ್ವ ತಿಳಿಸಿ ಎಲ್ಲ ರೈತರಿಗೂ ಕೃಷಿ ಆದಾಯದ ಹೊಸ ಮಾರ್ಗ ಪರಿಚಯಿಸುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

21/10/2021 04:14 pm

Cinque Terre

74.77 K

Cinque Terre

0

ಸಂಬಂಧಿತ ಸುದ್ದಿ