ಕುಂದಗೋಳ : ಪಟ್ಟಣದ ಎಪಿಎಂಸಿ ಕಟ್ಟಡದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಕೇಂದ್ರ ತೆರೆದಿದ್ರೂ ಹೆಸರು ಖರೀದಿ ಪ್ರಕ್ರಿಯೆಗೆ ಮೋಡ ಕವಿದ ವಾತಾವರಣ ಅಡ್ಡಿ ಉಂಟು ಮಾಡಿದೆ.
ಕುಂದಗೋಳ ತಾಲೂಕಿನ ರೈತರು ತಮ್ಮ ಸರದಿಗೆ ಅನುಸಾರವಾಗಿ ಹೆಸರು ಖರೀದಿ ಕೇಂದ್ರಕ್ಕೆ ಧಾನ್ಯ ತೆಗೆದುಕೊಂಡು ಬಂದ್ರೇ ಖರೀದಿ ಸಂದರ್ಭ ಧಾನ್ಯಗಳ ತೇವಾಂಶ ಏರಿಕೆ ಕಾಣುತ್ತಿದ್ದು ಅನಿವಾರ್ಯವಾಗಿ ರೈತರು ಎಪಿಎಂಸಿ ಕಟ್ಟಡದ ಮುಂದೆ ಟ್ರ್ಯಾಕ್ಟರ್ ನಿಲ್ಲಿಸಿಕೊಂಡು ಎರೆಡೆರಡು ದಿನ ಕಾಯುವ ಪರಿಸ್ಥಿತಿ ಎದುರಾಗಿದೆ ಹೀಗೆ ಕಾಯ್ದರೂ ಹೆಸರು ಬೆಳೆ ತೇವಾಂಶ ಏರುತ್ತಿದೆಯೆ ವಿನಃ ಕಡಿಮೆ ಆಗುತ್ತಿಲ್ಲ.
ಸರ್ಕಾರದವರು ಖರೀದಿದಾರಿಗೆ ಶೇ.12% ತೇವಾಂಶದ ಹೆಸರನ್ನು ಖರೀದಿ ಮಾಡಲು ಸೂಚಿಸಿದ್ದು ರೈತರು ಹೆಸರು 13 ರಿಂದ 14% ಪ್ರತಿಶತ ತೇವಾಂಶ ಕಂಡು ಬರುತ್ತಿವೆ.
ಇನ್ನೂ ರೈತರು ಹೆಸರು ಬೆಳೆ ಗುಣಮಟ್ಟ ನೋಡಿ ಖರೀದಿಸಿ ಇಲೆಕ್ಟ್ರಾನಿಕ್ ಯಂತ್ರದ ಫಲಿತಾಂಶ ನೋಡಿದ್ರೇ ನಾವು ಹೀಗೆ ಎಷ್ಟಂತ ಕಾಯೋದು ? ಎನ್ನುತ್ತಿದ್ರೇ ಕೆಲ ರೈತರು ತೇವಾಂಶ ಪರೀಕ್ಷೆ ಮಾಡಿಸೋದು ಜಾಸ್ತಿ ಬಂತದ್ರೇ ಮನೆ ಹೋಗೋದು ಇದೆ ಅವಸ್ಥೆ ಆಗಿದ್ದು ಹೆಸರು ಮಾರಾಟ ಪ್ರಕ್ರಿಯೆ ವಿಳಂಬವಾಗುತ್ತಿದೆ ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಗಮನಿಸಬೇಕಿದೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
30/09/2021 05:20 pm