ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ : ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಮೆಟ್ರಿಕ್'ಗೆ ಸಾಲಿ ಬಿಟ್ಟ ರೈತ ಈಗ ಸಾಧಕ

ನರಗುಂದ : ನಮ್ಮ ಹೊಲದಲ್ಲಿ ಉತ್ತಮ ಬೆಳೆ ಬರಲಿ, ಭೂತಾಯಿಯ ಮಡಿಲು ತುಂಬಲಿ, ಕಣ ಕಟ್ಟೆಗಳಲ್ಲಿ ರಾಶಿ ರಾಶಿ ತೆನೆ ಹಾಸಲಿ ಎಂಬ ಕನಸು ಯಾವ ರೈತನಿಗಿಲ್ಲ ಹೇಳಿ ಇಂತಹ ಕನಸನ್ನು ಇಲ್ಲೋಬ್ಬ ರೈತ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಕೃಷಿಹೊಂಡ ಮಾಡಿಕೊಂಡ ಜಾಣ್ಮೆ ನನಸು ಮಾಡಿದೆ.

ಅರೆ.! ಅದ್ಯಾವ್ ಯೋಜನೆ ಅಂದ್ರಾ ? ಅದು ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಯೋಜನೆ ಬರೀ ಯೋಜನೆಯಷ್ಟೇ ಅಲ್ಲಾ, ರೈತನ ಬೆವರಿನ ತಾಕತ್ತಿನ ಫಲವೇ ಇಂದು ನರಗುಂದ ತಾಲೂಕಿನ ಖಾನಾಪುರ ಗ್ರಾಮದ ರಮೇಶ್ ಮೈಲಾರಪ್ಪ ಮದಗುಣಕಿ ಹೊಲದಲ್ಲಿ ಈ ಪಾಟಿ ಹಸಿರ ಬಣ್ಣದ ರಂಗು ಚೆಲ್ಲುವ ಫಲದ ಬೆಳೆ ಎದೆ ಎತ್ತರಕ್ಕೆ ಬೆಳೆದು ನಿಂತಿದೆ.

ಮೆಟ್ರಿಕ್ ಶಿಕ್ಷಣ ಮುಗಿಸಿ ಕೂರಿಗೆ ಯನ್ನೇ ನಂಬಿ ರೈತಾಪಿ ಕಸುಬು ಮಾಡಿ ನಷ್ಟದ ದಿನ ದೂಡುತ್ತಿದ್ದ ರೈತ ರಮೇಶ್ ಮದಗುಣಕಿ ಕೃಷಿಹೊಂಡ ಆಶ್ರಿತವಾಗಿ ಹೆಸರು, ಹತ್ತಿ, ಗೋವಿನಜೋಳ, ಶೇಂಗಾ ಬೆಳೆ ಬೆಳೆದಿದ್ದು ಬರೋಬ್ಬರಿ 5 ರಿಂದ 6 ಲಕ್ಷ ರೂಪಾಯಿ ಆದಾಯದ ಹೊಸ್ತಿಲಲ್ಲಿದ್ದಾರೆ.

ತಮ್ಮ 16 ಏಕರೆ ಜಮೀನಿನ ಕೃಷಿ ಕಾಯಕಕ್ಕೆ ನೆರವಾಗಲು ನೂರು ನೂರು ಸುತ್ತಳತೆ ಕೃಷಿಹೊಂಡ ನಿರ್ಮಿಸಿಕೊಂಡ ಇವರು, ಈಗಾಗಲೇ ಮುಂಗಾರಿನ ಹೆಸರು, ಶೇಂಗಾ ಬೆಳೆಯಲ್ಲಿ ಭರ್ಜರಿ ಇಳುವರಿ ಪಡೆದಿದ್ದು, ಮುಂಬುರುವ ಫಲಕ್ಕೆ ಕೃಷಿಹೊಂಡದ ನೀರಿನ ಜೊತೆ ಸಾರ್ಥಕ ಬೆವರಿನ ಶ್ರಮವನ್ನು ದುಡಿಮೆ ರೂಪದಲ್ಲಿ ಹರಸುತ್ತಿದ್ದಾರೆ.

ಇದೇ ಕೃಷಿಹೊಂಡ ಇರದ ದಿನಗಳಲ್ಲಿ 16 ಎಕರೆ ಭೂಮಿಯಲ್ಲಿ ನಷ್ಟದ ಛಾಯೆ ಆವರಿಸಿದ್ದ ಕ್ಷಣಗಳಿಗೆ ಭಗೀರಥಿಯಾಗಿ ಬಂದ ಕೃಷಿಹೊಂಡ ನಿರ್ಮಾಣ ಕಾರ್ಯ ರಮೇಶ್'ನಂತಹ ಅನೇಕ ರೈತರ ಬಾಳಲ್ಲಿ ಹೊಂಬೆಳಕು ಚೆಲ್ಲಿದೆ.

Edited By : Nagesh Gaonkar
Kshetra Samachara

Kshetra Samachara

27/09/2021 03:34 pm

Cinque Terre

114.32 K

Cinque Terre

0

ಸಂಬಂಧಿತ ಸುದ್ದಿ