ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ : 73 ರ ಇಳಿವಯಸ್ಸು ಬಿಎಸ್ಸಿ ಪದವಿ ಸಕ್ಸಸ್ಸು ಹೊಸ ಪರೀಕ್ಷೆಯ ಕೃಷಿಯೇ ಹುಮ್ಮಸ್ಸು

ನರಗುಂದ : 73 ರ ವಯಸ್ಸಿನಲ್ಲೂ ನಿಲ್ಲದ ಕೃಷಿ ಕಾಯಕ, ಹೊಸ ಹೊಸ ಆವಿಷ್ಕಾರ ಪ್ರಯತ್ನ ಅಂದ್ರೇ ಈ ರೈತನಿಗೆ ಇನ್ನೂ ಸಂತಸ, ಆ ಸಂತಸದ ಬದುಕನ್ನು ಮತ್ತಷ್ಟು ಇಮ್ಮುಡಿ ಗೊಳಿಸಿದ್ದೇ ಈ ಕೃಷಿಹೊಂಡ ನಿರ್ಮಾಣದ ಕಾಯಕಲ್ಪ, ಆ ಮೂಲಕ ಯಶಸ್ವಿಯಾದವರೇ ನರಗುಂದ ತಾಲೂಕಿನ ಖಾನಾಪುರ ಗ್ರಾಮದ ರೈತ ಹಣುಮಂತಪ್ಪ.

ಎಸ್.! ಈ ರೈತನ ಹೆಸರು ಹಣುಮಂತಗೌಡ ಹೊಸಮನಿ ಬಿಎಸ್ಸಿ ಪದವೀಧರಾದ ಇವ್ರು ಕೃಷಿಯಲ್ಲೇ ಹೊಸ ಆವಿಷ್ಕಾರ ಮಾಡುತ್ತಾ ತಮ್ಮ ಪದವಿ ಶ್ರೀಮಂತಿಕೆ ಬದಿಗೊತ್ತಿ ರೈತಾಪಿ ಕಾಯಕದಲ್ಲಿ ಖುಷಿ ಕಂಡವರು ಅದರಲ್ಲೂ ವಿಶೇಷವಾಗಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಮಾಡಿಸಿದ ಇವರು ಹೊಸ ಮಾದರಿ ಬೆಳೆ ಪರೀಕ್ಷೆಗೆ ಮುಂದಾಗಿ ತಮ್ಮ ಹೊಲದಲ್ಲಿ ಬಾಳೆ, ಡ್ರ್ಯಾಗನ್ ಪ್ರುಟ್ಸ್, ತೆಂಗಿನಮರ, ಕರಿಬೇವು, ಮಾವು ಬೆಳೆ ಬೆಳೆದಿದ್ದು ಈ ಬೆಳೆ ಮಣ್ಣಿನ ಗುಣಮಟ್ಟದ ಪರೀಕ್ಷೆ ಹಂತದಲ್ಲಿವೆ.

ಇದಲ್ಲದೆ ತಮ್ಮ 7 ಏಕರೆ ಹೊಲದಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ನೂರು ನೂರು ಸುತ್ತಳತೆ ಕೃಷಿಹೊಂಡ ನಿರ್ಮಿಸಿಕೊಂಡು ಹೆಸರು, ಗೋವಿನಜೋಳ ಬೆಳೆದು 3 ಲಕ್ಷ ಆದಾಯದ ಭರವಸೆಯ ನಿರೀಕ್ಷೆ ಹೊಂದಿದ್ದು ಹಿಂಗಾರು ಉತ್ಪನ್ನ ತೆಗೆಯಲು ಕೃಷಿಹೊಂಡವನ್ನೇ ಆಶ್ರಯಿಸಿದ್ದು ಇತರೆ ರೈತರಿಗೆ ಇವರ ಹೊಲದ ಬೆಳೆ ಕೃಷಿಹೊಂಡ ನಿರ್ಮಾಣ ಫಲದ ಮಾರ್ಗೋಪಾಯ ಪಾಠಶಾಲೆ ಆಗಿದೆ.

ತಾವು ಬಿಎಸ್ಸಿ ಪದವೀಧರರಾದ್ರೂ ಕೃಷಿ ಕೆಲಸ ಬಿಡದ ಇವರು ಕೃಷಿಹೊಂಡ ಆಶ್ರಿತವಾಗಿ ತೋಟಗಾರಿಕೆ ಮಾಡಿ ವಿವಿಧ ತರಕಾರಿ ಬೆಳೆ ಬೆಳೆಯುವ ಆಶೋತ್ತರ ಹೊಂದಿದ್ದು, ಕೃಷಿಹೊಂಡ ನಿರ್ಮಾಣದ ಯೋಜನೆ ತಂದಂತಹ ದೇಶಪಾಂಡೆ ಫೌಂಡೇಶನ್ ಕಾರ್ಯಕ್ಕೆ ಸಲಾಂ ಎಂದಿದ್ದಾರೆ.

Edited By : Shivu K
Kshetra Samachara

Kshetra Samachara

24/09/2021 11:18 am

Cinque Terre

102.64 K

Cinque Terre

3

ಸಂಬಂಧಿತ ಸುದ್ದಿ