ರೈತರು ಕೇವಲ ಮಳೆಯಾಶ್ರಿತ ಬೆಳೆಗಳನ್ನು ಮಾತ್ರ ಬೆಳೆಯದೆ, ಬಹು ಬೆಳೆ ಪದ್ಧತಿ ಅನುಸರಿಸಬೇಕು. ಆಧುನಿಕ ಕೃಷಿ ಪದ್ಧತಿಗೆ ಹೊಂದಿಕೊಳ್ಳಬೇಕು. ಆಗ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿಕೊಳ್ಳಬಹುದು ಎಂದು ಮಾತಿಗೆ ಹೇಳಲು ಮಾತ್ರ ಚಂದ.
ಆದರೆ ನಿತ್ಯ ಅನ್ನದಾತ ಎದುರಿಸುವ ಸವಾಲುಗಳು ಒಂದೆರಡಲ್ಲ ಸಮೃದ್ಧ ಫಸಲು ಕೈ ಸೇರುವ ಸಮಯದಲ್ಲಿ ಮಳೆ ಕೈಕೊಡುವುದು ಸಾಮಾನ್ಯವಾಗಿದೆ. ಅದರಲ್ಲೂ ಬಂಡಾಯದ ನಾಡು ನವಲಗುಂದ ನರಗುಂದದಲ್ಲಿ ಒಣಬೇಸಾಯದಲ್ಲಿ ಒಳ್ಳೆಯ ಬೆಳೆ ಬೆಳೆಯುವುದು ಒಂದು ಸವಾಲಾಗಿದೆ.
ಈ ಭಾಗದಲ್ಲಿ ಉತ್ಸುಕತೆಯಿಂದ ಉತ್ತಮ ಇಳುವರಿಯ ಬೆಳೆ ಬೆಳೆಯಬೇಕು ಎನ್ನುವ ರೈತರಿಗೆ ಕೃಷಿಹೊಂಡಗಳನ್ನು ನಿರ್ಮಿಸಿಕೊಡುವ ಮೂಲಕ ದೇಶಪಾಂಡೆ ಫೌಂಡೇಶನ ಇತರ ಸಂಸ್ಥೆಗಳಿಗಿಂತಲೂ ಭಿನ್ನವಾಗಿ ಕೆಲಸ ಮಾಡುತ್ತಿದೆ.
ಸದ್ಯ ದೇಶಪಾಂಡೆ ಫೌಂಡೇಶನ್ ವತಿಯಿಂದ ಕೃಷಿ ಹೊಂಡ ನಿರ್ಮಿಸಿಕೊಂಡು ಮಿಶ್ರ ಬೆಳೆಬೆಳೆದು ಇತರರಿಗೆ ಮಾದರಿಯಾದ ಪ್ರಗತಿಪರ ರೈತನ ಬಗ್ಗೆ ಇಂದಿನ ದೇಶ್ ಕೃಷಿಯಲ್ಲಿ ಸಂಚಿಕೆಯಲ್ಲಿ ತಿಳಿಯೋಣ ಬನ್ನಿ..
Kshetra Samachara
28/08/2021 06:03 pm