ನರಗುಂದ: ಒಣ ಬೇಸಾಯದಲ್ಲಿ ಬೆಳೆ ಬೆಳೆದು ಲಕ್ಷ ಲಕ್ಷ ಆದಾಯ ಗಳಿಸಿದ ರೈತನೇ ನಿಜವಾದ ಮಹಾಶೂರ. ಒಮ್ಮೊಮ್ಮೆ ಮಳೆ ಕೈಕೊಟ್ಟರೂ ನಮ್ಮ ಶ್ರಮ ಕೈಕೊಡಬಾರದು. ಆ ರೀತಿ ನಾವು ದುಡಿಯಬೇಕು. ದುಡಿದು ಹಸಿದವರಿಗೆ ಊಟ ಹಾಕಬೇಕು. ಆ ಮೂಲಕ ಪವಿತ್ರ ಕಾಯಕ ಮಾಡಬೇಕು. ಇದರೊಂದಿಗೆ ನಾವು ನಮ್ಮ ಪರಂಪರಾಗತ ಬೇಸಾಯ ಪದ್ಧತಿ ಉಳಿಸಿಕೊಳ್ಳಬೇಕು. ಇಂತಹ ವಿಚಾರಗಳನ್ನೇ ನಂಬಿಕೊಂಡು ಸ್ವಾಭಿಮಾನಿಯಾಗಿ ಕೃಷಿ ಮಾಡ್ತಿದ್ದಾರೆ ನರಗುಂದ ತಾಲೂಕು ಖಾನಾಪುರ ಗ್ರಾಮದ ವಿದ್ಯಾವಂತ ಅನ್ನದಾತ ನಾಗನಗೌಡ ಕಗದಾಳ ಅವರು. ಪದವೀಧರನಾಗಿದ್ದರೂ ಭೂಮಿಯೇ ಇವರ ಉಸಿರು. ಬನ್ನಿ ಯುವ ರೈತ ನಾಗನಗೌಡ ಅವರು ನಿಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತಾಡಿದ್ದಾರೆ. 24 ಎಕರೆ ಹೊಲದಲ್ಲಿ ಕೃಷಿ ಮಾಡುತ್ತಿರುವ ಇವರ ಅನುಭವದ ಮಾತು ಕೇಳೋಣ.
Kshetra Samachara
12/08/2021 05:00 pm