ಧಾರವಾಡ: ರೈತರ ಕೃಷಿ ಉತ್ಪನ್ನಗಳನ್ನು ದ್ವಿಗುಣಗೊಳಿಸಿ ಆದಾಯ ಹೆಚ್ಚಿಸಲು ರಾಜ್ಯ ಸರ್ಕಾರವು ರೈತರಿಗೆ ಕೃಷಿ ಕಾರ್ಯಗಳಿಗಾಗಿ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಉಪಕರಣಗಳು ಲಭಿಸುವಂತೆ ಸೇವಾ ಕೇಂದ್ರಗಳನ್ನು ಪ್ರತಿ ಹೋಬಳಿ ಮಟ್ಟದಲ್ಲಿ ಸ್ಥಾಪಿಸಲು ಕ್ರಮ ಕೈಗೊಂಡಿದ್ದು, ರೈತರು ಸದುಪಯೋಗ ಮಾಡಿಕೊಳ್ಳಬೇಕೆಂದು ಶಾಸಕ ಅಮೃತ ದೇಸಾಯಿ ಹೇಳಿದರು.
ಅವರು ಇಂದು ಬೆಳಿಗ್ಗೆ ಗರಗ ಗ್ರಾಮದಲ್ಲಿ 2021-2022 ನೇ ಸಾಲಿನ ಗರಗ ಹೋಬಳಿ ಮಟ್ಟದ ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ರೈತ ಸೇವಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗರಗ ಗ್ರಾಮದಲ್ಲಿ ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ರೈತ ಸೇವಾ ಕೇಂದವನ್ನು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಠಾಪಿಸಲಾಗಿದ್ದು, ಇದರಲ್ಲಿ 70 ಲಕ್ಷ ಸರ್ಕಾರದ ವತಿಯಿಂದ ಹಾಗೂ 30 ಲಕ್ಷ ರೂಪಾಯಿ ಚಿತ್ರದುರ್ಗದ ವರ್ಷ ಅಸೋಸಿಯೇಟ್ಸ್ ಸಹಭಾಗಿತ್ವದಲ್ಲಿ ಹೂಡಿಕೆ ಮಾಡಲಾಗಿದೆ. ಬಾಡಿಗೆ ಆಧಾರಿತ ಯಂತ್ರೋಪಕರಣಗಳ ರೈತ ಸೇವಾ ಕೇಂದ್ರದ ಸದುಪಯೋಗವನ್ನು ಪಡೆದುಕೊಳ್ಳಲು ಮತ್ತು ಕೃಷಿ ಆಧಾಯವನ್ನು ದ್ವಿಗುಣಗೊಳಿಸಲು ರೈತರಿಗೆ ತಿಳಿಸಿದರು.
ಬಾಡಿಗೆ ಆಧಾರಿತ ಯಂತ್ರೋಪಕರಣಗಳ ರೈತ ಸೇವಾ ಕೇಂದ್ರದಲ್ಲಿ ವಿವಿಧ 44 ಕೃಷಿ ಯಂತ್ರೋಪಕರಣಗಳನ್ನು ಇಡಲಾಗಿದ್ದು, ಅದರಲ್ಲಿ ಮುಖ್ಯವಾಗಿ ಬಹು ಬೆಳೆ ಒಕ್ಕಣಿ ಯಂತ್ರ, ರೋಟೋವೇಟರ್, ಬಿತ್ತನೆ ಕೂರಿಗೆ, ಕಸ ತೆಗೆಯುವ ಯಂತ್ರ, ನೇಗಿಲು, ಕುಂಟೆ, 4 ಟ್ರಾಕ್ಟರ್‌ಗಳನ್ನು ಇಡಲಾಗಿದೆ. ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿವಿಧ ಸೌಲತ್ತುಗಳನ್ನು ಪಡೆಯಲು ರೈತರಿಗೆ ಶಾಸಕರು ವಿನಂತಿಸಿದರು.
ಧಾರವಾಡ ತಾಲೂಕಿನ ತುಪ್ಪರಿಹಳ್ಳದ ನೀರಾವರಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿರುವುದಾಗಿ ಹೇಳಿದ ಅವರು, ಶೀಘ್ರದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದೆಂದು ಶಾಸಕ ಅಮೃತ ದೇಸಾಯಿ ಹೇಳಿದರು.
ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೆಶಕ ರಾಜಶೇಖರ ಬಿಜಾಪುರ ಅವರು ಮಾತನಾಡಿ, ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರದ ಪ್ರಮುಖ ಉದ್ದೇಶ, ಕಾರ್ಯವೈಖರಿ, ಸೇವಾ ಕೇಂದ್ರದಿಂದ ಆಗುವ ಉಪಯೋಗಗಳು ಕುರಿತು ಮಾಹಿತಿ ನೀಡಿದರು. ಮತ್ತು ಸೇವಾ ಕೇಂದ್ರದ ಸದುಪಯೋಗ ಪಡೆದುಕೊಳ್ಳುಲು ರೈತರಿಗೆ ಮಾಹಿತಿ ತಿಳಿಸಿದರು.
Kshetra Samachara
02/08/2021 09:32 pm