ವರದಿ: ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
ಕುಂದಗೋಳ : ಇನ್ನೇನು ಎರೆಡ್ಮೂರು ತಿಂಗಳಲ್ಲಿ ರೈತರು ಮುಂಗಾರು ಬೆಳೆದ ಶೇಂಗಾ, ಹೆಸರು, ಜೋಳ ಸೇರಿದಂತೆ ಇತರ ಬೆಳೆಗಳು ಒಕ್ಕಲಿಗೆ ಬರಲಿದ್ದು ಮತ್ತೇ ರೈತರು ಬೆಂಬಲ ಬೆಲೆ ಅರಸಿ ಕೃಷಿ ಉತ್ಪನ್ನ ಮಾರುಕಟ್ಟೆ ಎಡೆಗೆ ಬರ್ತಾರೆ ಆದ್ರೇ ಮಾರುಕಟ್ಟೆಗೆ ಬರೋ ರೈತರಿಗೆ ಅಗತ್ಯ ಮಾಹಿತಿ ನೀಡಲು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೂಕ್ತ ಸಿಬ್ಬಂದಿಗಳೇ ಇಲ್ಲಾ.
ಹೌದು ! ಕುಂದಗೋಳದ ಕೃಷಿ ಉತ್ಪನ್ನ ಮಾರುಕಟ್ಟೆ ಬರೋಬ್ಬರಿ 11 ಹುದ್ದೆ ಖಾಲಿ ಇದ್ದು ಕೃಷಿ ಮಾರುಕಟ್ಟೆ ಕಾರ್ಯದರ್ಶಿ ಸಹ ಅಣ್ಣಿಗೇರಿ ಕುಂದಗೋಳ ಎರೆಡು ಕಚೇರಿಗಳನ್ನು ಪ್ರಭಾರಿಯಾಗಿ ನಿಭಾಯಿಸುತ್ತಿದ್ದಾರೆ, ಇದಲ್ಲದೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಂಜೂರಾದ ಸಹಾಯ ಕಾರ್ಯದರ್ಶಿ 1 ಹುದ್ದೆ, ಮಾರಾಟ ಸಹಾಯಕರು 5 ಹುದ್ದೆ, ದ್ವೀತಿಯ ದರ್ಜೆ ಲೆಕ್ಕ ಸಹಾಯಕರು 1 ಹುದ್ದೆ, ವಾಹನ ಚಾಲಕ 1 ಹುದ್ದೆ, 3 ಸಿಪಾಯಿ ಹುದ್ದೆಗಳು ಖಾಲಿ ಇದ್ದು ಕೃಷಿ ಉತ್ಪನ್ನ ಮಾರುಕಟ್ಟೆ ಸಿಬ್ಬಂದಿ ಕೊಠಡಿ ಬಿಕೋ ಎನ್ನುತ್ತಿದ್ದು ಮಾರುಕಟ್ಟೆ ಧಾನ್ಯಗಳ ದರ ತಿಳಿಸುವ ತಂತ್ರಾಂಶ ಸಹ ಹಾಳಾಗಿ ರೈತರಿಗೆ ಪೂರಕ ಮಾಹಿತಿ ಇಲ್ಲವಾಗಿದೆ.
ಈ ಪರಿಣಾಮ ಖಾಸಗಿ ವರ್ತಕರರು ಮತ್ತು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಎಡೆಗೆ ಕೆಲ ರೈತರು ಬರುವುದನ್ನು ಕಡಿಮೆ ಮಾಡಿದ್ರೆ, ಇನ್ನೂ ಮಾರುಕಟ್ಟೆಗೆ ಬರುವ ರೈತರಿಗೆ ಸೂಕ್ತ ಮಾಹಿತಿ ಕೊರತೆ ಇದೆ, ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗೆ ರೈತರಿಂದ ಬರುವ ಆದಾಯ ಸಹ ವರ್ಷದಿಂದ ವರ್ಷಕ್ಕೆ ಕನಿಷ್ಠವಾಗುತ್ತಿದೆ.
ಒಟ್ಟಾರೆ ರೈತರಿಗೆ ಅಗತ್ಯ ಮಾಹಿತಿ ನೀಡಿ, ಕೃಷಿ ಉತ್ಪನ್ಪ ಮಾರುಕಟ್ಟೆ ಎಡೆಗೆ ರೈತರನ್ನು ಕರೆ ತರಬೇಕಾದ ಮಾರುಕಟ್ಟೆಗೆ ರೈತರೇ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಎಂದು ಕೇಳುವ ಸ್ಥಿತಿ ನಿರ್ಮಾಣವಾಗಿದೆ.
Kshetra Samachara
30/07/2021 05:43 pm