ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮುಂಗಾರು ಲಾಸ್ ಹಿಂಗಾರು ಲಾಸ್ ಕೃಷಿ ಹೊಂಡದಲ್ಲೇ ಚಾನ್ಸ್

ಕುಂದಗೋಳ : ಮುಂಗಾರು ಬೆಳೆ ಅತಿವೃಷ್ಟಿಗೆ ಸಿಲುಕಿ ಹಾಳಾಗಿ ಹೋಯ್ತು, ಹಿಂಗಾರು ಬೆಳೆ ಅಕಾಲಿಕ ಮಳೆಗೆ ತುತ್ತಾಗಿ ಕಳಪೆಯಾಗಿದ್ದು ಇಂತಹ ಕಷ್ಟದಲ್ಲೊಬ್ಬ ರೈತ ಕೃಷಿಹೊಂಡದಿಂದ ಮತ್ತೇ ಹೊಸ ನಗೆ ಬೀರಿದ್ದಾನೆ.

ಇವ್ರೇ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ಬಸವರಾಜ ಯೋಗಪ್ಪನವರ ತಮ್ಮ ಅಂಗವೈಕಲ್ಯ ಮರೆತು ಇಳುವರಿ ಕಳೆದುಕೊಂಡ ಬೆಳೆ ನೋಡಿ ಕೊರಗುವ ಬದಲು ಕುಟುಂಬ ಸಲಹಲು ಕೃಷಿ ಹೊಂಡ ಆಶ್ರಿತವಾಗಿ ಬೇಸಿಗೆಯಲ್ಲೂ ಸವತೆಕಾಯಿ ಬೆಳೆ ಬೆಳೆದಿದ್ದಾರೆ.

ತೋಟಗಾರಿಕೆ ಇಲಾಖೆ ಸಹಾಯ ಧನದಲ್ಲಿ ಮಂಜೂರಾದ 100×100 ಅಳತೆಯ ಕೃಷಿ ಹೊಂಡದಲ್ಲಿ ಮಳೆಗಾಲದಲ್ಲಿ ಸಂಗ್ರಹವಾದ ನೀರನ್ನು ಸದ್ಯ ಮತ್ತೆ ಸವತೆಕಾಯಿ ಬೆಳೆಯಲು ಬಳಸುತ್ತಿದ್ದಾರೆ.

ಸದ್ಯ ಅರ್ಧ ಎಕರೆ ಹೊಲದಲ್ಲಿ ಇಳುವರಿ ನೋಡಲು ಸವತೆ ಬೆಳೆ ಬೆಳೆದಿರುವ ಇವರು ಮುಂಬರುವ ದಿನಗಳಲ್ಲಿ ಹೆಚ್ಚಿನ ತರಕಾರಿ ಬೆಳೆಯುವ ವಿಶ್ವಾಸ ಹೊಂದಿದ್ದು ಕುಟುಂಬ ನಿರ್ವಹಣೆ ಹೊಸ ಪ್ಲ್ಯಾನ್ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

26/02/2021 10:01 am

Cinque Terre

28.99 K

Cinque Terre

0

ಸಂಬಂಧಿತ ಸುದ್ದಿ