ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಕಾಲಿಕ ಮಳೆಗೆ ಬೆಳೆ ಹಾನಿ, ಬೆಳೆ ಪರಿಹಾರಕ್ಕೆ ಕಳಸಾ ಬಂಡೂರಿ ಹೋರಾಟಗಾರ ಒತ್ತಾಯ...

ಹುಬ್ಬಳ್ಳಿ: ಅಕಾಲಿಕ ಮಳೆ ಮತ್ತು ಆಲೆಕಲ್ಲು ಬಿದ್ದಿರುವುದರಿಂದ ಹಿಂಗಾರು ಬೆಳೆಗಳು ಕಟಾವು ಮಾಡುವ ಸಂದರ್ಭದಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಅದರಲ್ಲೂ ಧಾರಾವಾಡ ಜಿಲ್ಲೆಯಲ್ಲಿ ಅಕಾಲಿಕ ಮಳೆ ಬಿದ್ದಿರುವದರಿಂದ ಜೋಳ, ಕಡಲೆ, ಹತ್ತಿ, ಗೋಧಿ, ಕುಸಬಿ,ಸಜ್ಜೆ, ತೊಗರಿ ಹಾಗೂ ಮೆಣಸಿನಕಾಯಿ ಹೀಗೆ ಹತ್ತಾರು ಹಿಂಗಾರು ಬೆಳೆಗಳು ಹಾನಿಯಾಗಿವೆ.

ಇದರಿಂದ ರೈತರಿಗೆ ಬಹಳ ದೊಡ್ಡ ಪ್ರಮಾಣದ ನಷ್ಟ ಸಂಭವಿಸಿದೆ. ಬೆಳೆ ಬೆಳೆಯಲು ರೈತರು ಸಾಕಷ್ಟು ಸಾಲ ಮಾಡಿದ್ದಾರೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರುವ ಮುನ್ನ ವರುಣನ ಅವಕೃಪೆಗೆ ಒಳಗಾಗಿದೆ. ಈ ಅಕಾಲಿಕ ಮಳೆಯಿಂದ ರೈತರಿಗೆ ಬಹಳ ದೊಡ್ಡ ತೊಂದರೆ ಆಗುತ್ತಿರುವುದರಿಂದ ರಾಜ್ಯ ಸರ್ಕಾರವು ಜಿಲ್ಲಾಧಿಕಾರಿ ಮುಖಾಂತರ ವಿಶೇಷವಾದ ಕಮೀಟಿಯನ್ನು ಮಾಡಿ ಸರ್ವೆ ಮಾಡಿ ಎಕರೆಗೆ ಸುಮಾರು 60ರಿಂದ 70 ಸಾವಿರ ರೂಪಾಯಿಗಳನ್ನು ಪರಿಹಾರ ನೀಡಬೇಕು. ಸರ್ಕಾರ ಸೂಕ್ತವಾದ ಪರಿಹಾರ ಧನ ಕೊಡದೆ ಇದ್ದರೆ ರಾಜ್ಯಾದ್ಯಂತ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ತೇಜಿ ಒತ್ತಾಯಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

22/02/2021 12:16 pm

Cinque Terre

23.78 K

Cinque Terre

1

ಸಂಬಂಧಿತ ಸುದ್ದಿ