ನವಲಗುಂದ: 'ಮಳೆಯಾದ್ರೆ ಬೆಳೆ, ಇಲ್ಲ ಅಂದ್ರೆ ಹೊಲ, ಬದುಕು ಖಾಲಿ ಖಾಲಿ. ಆದ್ರೆ ಈಗ ಹಾಗಲ್ಲ ನೋಡಿ... ಕೃಷಿ ಹೊಂಡ ನಿರ್ಮಾಣ ಆದ್ಮೇಲೆ ಜಮೀನಿನಲ್ಲಿ ಹಸಿರು ಹೆಚ್ಚಾಗಿದೆ, ಬದುಕು ಹಸನಾಗಿದೆ. ಹೀಗೆ ಹೇಳುತ್ತಿರುವುದುಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ತಿರ್ಲಾಪುರದ ರೈತ ರಾಜು ಮಂಕನಿ..
ಎಸ್.. ಕೃಷಿ ಹೊಂಡ ನಿರ್ಮಾಣದ ರಾಜು ಮಂಕನಿ ಅವರ ಆದಾಯ ದ್ವಿಗುಣಗೊಂಡಿದೆ. ಅಷ್ಟೇ ಅಲ್ಲದೆ ಸಕಾಲಕ್ಕೆ ಮಳೆಯಾಗದಿದ್ದರೂ ಬೆಳೆ ತೆಗೆಯುತ್ತೇನೆ ಎಂಬ ವಿಶ್ವಾಸ ಹೆಚ್ಚಿದೆ. ದೇಶಪಾಂಡೆ ಫೌಂಡೇಶನ್ ಸಹಾಯದಿಂದ ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡ ರಾಜು ಅವರು ಇಂದು ಅನೇಕರಿಗೆ ಮಾದರಿ ರೈತರಾಗಿದ್ದಾರೆ.
ಈ ಹಿಂದೆ ಒಂದೊಂದು ವರ್ಷ ಸಕಾಲಕ್ಕೆ ಮಳೆಯಾಗದೆ ಬಿತ್ತಿದ ಬೀಜ ಹುಟ್ಟುತ್ತಲೇ ಇರಲಿಲ್ಲ. ಹೀಗಾಗಿ ನಷ್ಟ ಅನುಭವಿಸುತ್ತಿದ್ದೆವು. ಈಗ ಹಾಗಲ್ಲ ನೋಡಿ. ಕೆರೆ ನೀರು ಹಾಯಿಸಿ ಬೆಳೆ ತೆಗೆದುಕೊಳ್ಳುತ್ತೇವೆ ಎನ್ನುವ ವಿಶ್ವಾಸ ಹೆಚ್ಚಿದೆ ಎನ್ನುತ್ತಾರೆ ರಾಜು ಅವರು.
ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಂಡ ರಾಜು ಅವರು ಬೇರೆ ರೈತರಿಗೂ ಕೃಷಿ ಹೊಂಡ ನಿರ್ಮಿಸಿಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಒಣಬೇಸಾಯದಲ್ಲಿ ಕೃಷಿ ಹೊಂಡದ ಪಾತ್ರವನ್ನು ತಿಳಿಸಿಕೊಡುತ್ತಿದ್ದಾರೆ.
Kshetra Samachara
18/02/2021 07:02 pm