ಹುಬ್ಬಳ್ಳಿ: ಒಕ್ಕಲಿಗ ಒಕ್ಕಿದರೇ ಉಕ್ಕುವುದು ಜಗವೆಲ್ಲ.ಒಕ್ಕಲಿಗ ಒಕ್ಕದಿದ್ದರೇ ಬಿಕ್ಕುವುದು ಜಗವೆಲ್ಲ ಎಂಬುವಂತ ಮಾತಿದೆ.ಹಣದ ಆಸೆಗೆ ದೇಶಕ್ಕೆ ಅನ್ನ ಹಾಕುವ ರೈತನಿಗೆ ಮೋಸ ಮಾಡುವಂತ ಪ್ರಸಂಗಗಳು ಬಂದಿವೆ.ಇನ್ನೂ ಮೋಸಕ್ಕೆ ಒಳಗಾದ ರೈತ ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳುವಂತಾಗಿದೆ.ಅಷ್ಟಕ್ಕೂ ಇಲ್ಲಿ ಮೋಸ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ...
ಬೆಳೆದ ಮೆಣಸಿನಕಾಯಿ ಬೆಳೆಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಬಂದಿರುವ ರೈತ ಮಾರುಕಟ್ಟೆಯ ದರವನ್ನು ನೋಡಿ ಕಂಗಾಲ ಆಗಿದ್ದಾನೆ.ನಾವು ಬೆಳೆದಿರುವುದು ಬ್ಯಾಡಗಿ,ಡಬ್ಬಿ,ಕಡ್ಡಿ ತಳಿಯಾಗಿದ್ದರೂ ಕೂಡ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದುಕೊಂಡು ಮರುಗುತ್ತಿದ್ದಾನೆ.ವರ್ಷವೀಡಿ ಸಾಕಷ್ಟು ಹರಸಾಹಸ ಪಟ್ಟು ಬೆಳೆದ ಬೆಳೆಗೆ ಸರಿಯಾದ ಇಳುವರಿ ಇಲ್ಲ.ಇನ್ನೂ ದರವಂತೂ ಕೈ ಸುಡುವಂತಾಗಿದೆ.ಇದಕ್ಕೆ ಕಾರಣವೇ ಹಣದ ಆಸೆಗೆ ಬ್ಯಾಡಗಿ,ಡಬ್ಬಿ,ಕಡ್ಡಿಯಂತ ಪ್ರತಿಷ್ಠಿತ ತಳಿಗಳ ಹೆಸರಿನಲ್ಲಿ ರೈತರನ್ನು ಮೋಸಮಾಡಿ ಕಳಪೆ ಬೀಜವನ್ನು ಕೊಟ್ಟು ರೈತನಿಗೆ ಮೋಸ ಮಾಡಲಾಗುತ್ತಿದೆ.
ಊರಲ್ಲಿ ಮಾರಾಟ ಮಾಡಲು ಬಂದ ವ್ಯಾಪಾರಸ್ಥರು ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ.ಇದನ್ನು ನಂಬಿಕೊಂಡು ರೈತ ಮೋಸ ಹೋಗಿದ್ದಾನೆ.ತಮ್ಮ ಬಿಡಿಗಾಸಿನ ಆಸೆಗೆ ರೈತನ ಜೀವನದ ವರ್ಷದ ಗಂಜಿಗೆ ಕಲ್ಲು ಹಾಕಿದ್ದು,ಬೆಳೆದ ಮೆಣಸಿನಕಾಯಿ ಬೆಳೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಬಂದು ಕಣ್ಣಲ್ಲಿ ನೀರು ಹಾಕುತ್ತಿದ್ದಾನೆ. ಎಕರೆಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಚೀಲ ಮೆಣಸಿನಕಾಯಿ ಬೆಳೆಯಬಹುದಿತ್ತು.ಆದ್ರೆ ಮೋಸಗಾರರ ಮೋಸದ ಆಟಕ್ಕೆ ಬಲಿಯಾಗಿ ರೈತ ಕೇವಲ ನಾಲ್ಕು ಚೀಲ ಮೆಣಸಿನಕಾಯಿ ತೆಗೆದುಕೊಂಡು ಮಾರುಕಟ್ಟೆಗೆ ಬಂದಿದ್ದಾನೆ.ಸಾಲ ಮಾಡಿ ಕೃಷಿ ಮಾಡಿದ ರೈತನ ಜೀವನ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ.ಆದ್ರೇ ರೈತರು ಸರಿಯಾದ ಬೀಜಗಳನ್ನು ಪರಿಶೀಲನೆ ಮಾಡಿಕೊಂಡ ತೆಗೆದುಕೊಳ್ಳಬೇಕು ಅಲ್ಲದೇ. ಸರ್ಕಾರದ ಅನುಮತಿ ಪಡೆದ ಪ್ಯಾಕಿಂಗ್ ನಲ್ಲಿದ್ದರೇ ಮಾತ್ರ ತೆಗೆದುಕೊಳ್ಳಬೇಕು ಅಂತಾರೇ ಮರ್ಚೆಂಟ್ ಅಸೋಸಿಯೇಷನ್ ಮುಖ್ಯಸ್ಥರು..
Kshetra Samachara
06/02/2021 09:04 pm