ಧಾರವಾಡ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಸಾಲ ಮರು ಪಾವತಿ ಮಾಡುವಂತೆ ರೈತರಿಗೆ ನೋಟಿಸ್ ನೀಡುವ ಮೂಲಕ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ನೇಗಿಲಯೋಗಿ ರೈತ ಸೇವ ಸಂಘಟನೆ ಸದಸ್ಯರು ಸೋಮವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೊರೊನಾದಿಂದ ಈಗಾಗಲೇ ರೈತ ಸಮುದಾಯ ತತ್ತರಿಸಿ ಹೋಗಿದೆ. ಕೃಷಿ ಸಾಮಗ್ರಿಗಳ ಖರೀದಿಗೆ ರೈತರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕನಲ್ಲಿ ಸಾಲ ಪಡೆದುಕೊಂಡಿದ್ದಾರೆ. ಆದರೆ ಈಗ ಕೊರೊನಾ ಲಾಕ್ ಡೌನನಿಂದ ಮತ್ತು ಅತೀ ವೃಷ್ಟಿಯಿಂದ ಬೆಳೆ ಹಾಳಗಿ, ಬೆಳೆದ ಬೆಳೆಯು ಕೈಗೆ ಸಿಗದೇ ಹೋಗಿದೆ.
ಇದರ ಮಧ್ಯೆ ಕೆವಿಜಿ ಬ್ಯಾಂಕು ದಿಢೀರ್ ನೋಟಿಸ್ ಕಳುಹಿಸಿ ಸಾಲ ಮರು ಪಾವತಿ ಮಾಡುವಂತೆ ಒತ್ತಾಯಿಸುತ್ತಿದೆ. ರೈತರ ಆತ್ಮಹತ್ಯೆ ಹೆಚ್ಚಳವಾಗಲು ಇದೇ ಕಾರಣವಾಗಿದೆ. ಕೂಡಲೇ ಬ್ಯಾಕ್ ಅಧಿಕಾರಿಗಳ ವರ್ತನೆಗೆ ಕಡಿವಾಣ ಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
Kshetra Samachara
04/01/2021 08:41 pm