ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ರೈತ ಸಂಪರ್ಕ ಕೇಂದ್ರದಲ್ಲಿ ಹೆಚ್ಚಿನ ಬೆಲೆಗೆ ಎಣ್ಣೆ ಪಂಪ್ ಮಾರಾಟ ಕರವೇ ಅಧ್ಯಕ್ಷ ಆರೋಪ

ಕುಂದಗೋಳ : ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ನೀಡಲಾಗುವ ಎಣ್ಣೆ ಪಂಪಗಳನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕಲ್ಲಪ್ಪ ಹರಕುಣಿ ಆರೋಪ ಮಾಡಿದ್ದಾರೆ.

ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ಕುಂದಗೋಳದ ರೈತ ಸಂಪರ್ಕ ಕೇಂದ್ರದಲ್ಲಿ ಸರ್ಕಾರದಿಂದ ನೀಡಲಾಗುವ ಒಂದೇ ಬ್ಯಾಟರಿ ಹೊಂದಿರುವ ಎಣ್ಣೆ ಪಂಪಗಳನ್ನ 2500 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.

ಖಾಸಗಿ ಅಂಗಡಿಯಲ್ಲಿ ಡಬಲ್ ಬ್ಯಾಟರಿ ಹೊಂದಿರುವ ಗುಣಮಟ್ಟದ ಎಣ್ಣೆ ಪಂಪಗಳು 2200 ಲಭ್ಯವಾಗುತ್ತಿವೆ. ಸರ್ಕಾರ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಸಬ್ಸಿಡಿ ಹೆಸರಲ್ಲಿ ಹಗಲು ದರೋಡೆ ಮಾಡುತ್ತಿದ್ದಾರೆ ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ರೈತ ಸಮ್ಮುಖದಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತ ಸಂಪರ್ಕ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ಅಂಬಿಕಾ ಮಹೇಂದ್ರಕರ ಕಳೆದ ವರ್ಷ 2175 ರೂಪಾಯಿಗೆ ಎಣ್ಣೆ ಪಂಪ್ ಮಾರಾಟ ಮಾಡಿದ್ದೇವೆ.

ಈ ವರ್ಷ 2020-21ನೇ ಸಾಲಿನಲ್ಲಿ ಜಂಟಿ ಕೃಷಿ ನಿರ್ದೇಶಕರ ಇಲಾಖೆ 2475 ರೂಪಾಯಿಗೆ ಪಂಪ್ ಮಾರಾಟ ಮಾಡಲು ಸೂಚಿಸಿದ್ದು ನಾವು ಆ ಬೆಲೆಗೆ ಮಾರಾಟ ಮಾಡುತ್ತಿದ್ದೆವೆ ಈಗಾಗಲೇ 20 ಎಣ್ಣೆ ಪಂಪ್ ಮಾರಾಟವಾಗಿವೆ ಸರ್ಕಾರ ಮತ್ತು ಇಲಾಖೆಯ ನಿಯಮದ ಅನುಸಾರ ನಮ್ಮ ಕರ್ತವ್ಯ ಮಾಡಿದ್ದೇವೆಂದಿದ್ದಾರೆ.

Edited By :
Kshetra Samachara

Kshetra Samachara

22/09/2020 10:37 am

Cinque Terre

13.16 K

Cinque Terre

0

ಸಂಬಂಧಿತ ಸುದ್ದಿ