ನವಲಗುಂದ: ತಾಲೂಕಿನಲ್ಲಿ ಮುಂಗಾರು ಬೆಳೆ ನಂತರ ರೈತರು ಹರಗುವುದು, ಗುರದಾಳ ಹೊಡೆದು ಹಿಂಗಾರು ಬಿತ್ತನೆಗೆ ಭೂಮಿ ತಯಾರು ಮಾಡಲು ರೈತರಿಗೆ ಅನುಕೂಲವಾಗಿದೆ.
ಈ ಭಾಗದ ರೈತರಿಗೆ ಈ ವರ್ಷ ಅತಿವೃಷ್ಟಿಯಿಂದಾಗಿ ಬೆಳೆ ಕೈ ಕೊಟ್ಟಿದೆ. ಆರಿದ್ರ ಮಳೆಯಿಂದ ಶುರುವಾದ ಮಳೆಗಾಲ ಅತಿವೃಷ್ಟಿಯಿಂದಾಗಿ ಹೆಸರು ಗಿಡಗಳು ಕೂಡ ನೆಲಕಚ್ಚಿದ್ದು ಹೆಸರುಕಾಳು ಕೆಟ್ಟು ಹೋಗಿವೆ ಹಾಗೆ ರಸಗೊಬ್ಬರದ ಕೊರತೆಯಿಂದಾಗಿ ನವಲಗುಂದ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಮೆಕ್ಕೆಜೋಳದ ಬೆಳೆ ಕೂಡ ಕೆಟ್ಟುಹೋಗಿದ್ದು ಯಾವುದೇ ಒಬ್ಬ ಅಧಿಕಾರಿಯೂ ಕೂಡ ಹೊಲಕ್ಕೆ ಭೇಟಿ ನೀಡಿಲ್ಲ ಎಂದು ರೈತರು ಅಳಲು ತೋಡಿಕೊಂಡರು.
Kshetra Samachara
06/10/2020 05:28 pm