ಕಲಘಟಗಿ:ತಾಲೂಕಿನ ಸೂರಶೆಟ್ಟಿಕೊಪ್ಪ,ನಾಗನೂರ ಹಾಗೂ ದ್ಯಾಮಾಪುರ ಗ್ರಾಮಗಳ ರೈತರ ಬೊರವೆಲ್ ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವಂತೆ ಮಾಚಾಪುರ ಬಳಿಯ ಹೆಸ್ಕಾಂ ಕಚೇರಿಗೆ ರೈತರು ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು ಆದರೆ ಅಲ್ಲಿ ರೈತರ ಸಮಸ್ಯೆ ಆಲಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ಇರಲಿಲ್ಲ.
ಹಲವಾರು ದಿನಗಳಿಂದ ಗುಣಮಟ್ಟದ ವಿದ್ಯುತ್ ಬಾರದೇ ಬೊರವೆಲ್ ಗಳು ಪ್ರಾರಂಭವಾಗುತ್ತಿಲ್ಲ, ಇದರಿಂದ ಬೆಳೆಗಳು ಒಣಗಿ ಹಾಳಾಗುತ್ತಿವೆ.ಆದ್ದರಿಂದ ಏಳು ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವಂತೆ ರೈತರು ಒತ್ತಾಯಿಸಿದರು.
ಹೆಸ್ಕಾಂ ಕಚೇರಿಯಲ್ಲಿ ಸಿಬ್ಬಂದಿ ಯಾರು ಇಲ್ಲದ ಕಾರಣ ರೈತರು ಪೊಲೀಸ್ ಠಾಣೆಗೆ ಮನವಿ ನೀಡಿದರು.
Kshetra Samachara
25/12/2020 04:44 pm