ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಈ ಹಸುವಿನ ಹೊಟ್ಟೆಯಲ್ಲಿ ಸಿಕ್ಕಿದ್ದೇನು ಗೊತ್ತಾ...? ಹೊಟ್ಟೆಯಲ್ಲಿ ಇದ್ದಿದ್ದಾದ್ರು ಏನು!

ಧಾರವಾಡ: ದನಗಳು ಎಲ್ಲೆಂದರಲ್ಲಿ ಬಿದ್ದಿರುವ ಕಸ ಕಡ್ಡಿ ತಿನ್ನುತ್ತವೆ ಇದು ಎಲ್ಲರಿಗೂ ತಿಳಿದಿರುವ ಸತ್ಯ.

ಆದರೆ ತಾಲೂಕಿನ ಹಾರೋಬೆಳವಡಿಯಲ್ಲಿ ಹಸುವಿನ ಹೊಟ್ಟೆಯಲ್ಲಿ ಆಶ್ಚರ್ಯಕರ ವಸ್ತುಗಳು ಪತ್ತೆಯಾಗಿವೆ.

ರಾಮಪ್ಪ ಉದಮೇಶಿ ಎಂಬುವವರಿಗೆ ಸೇರಿದ ಹಸು ಕೆಲವು ದಿನಗಳಿಂದ ಅಜಿರ್ಣತೆಯಿಂದ ಬಳಲುತ್ತಿದ್ದ ಕಾರಣ ವೈದ್ಯರನ್ನು ಸಂಪರ್ಕಿಸಿದ್ದಾರೆ.

ತಕ್ಷಣ ಪಶುವೈದ್ಯರಾದ ಡಾ.ವಿನೀತ, ಡಾ.ತಿಪ್ಪಣ್ಣ ರಾಂಪೂರೆ ಹಾಗೂ ಡಾ. ಕಿರಣಕುಮಾರ ಇವರ ತಂಡ ಹಸು ಶಸ್ತ್ರ ಚಿಕಿತ್ಸೆ ಮಾಡಿ ಬರೊಬ್ಬರಿ 45 ಕೆ.ಜಿ ತೂಕದ ಪ್ಲಾಸ್ಟಿಕ್ ತೆಗೆದು ಹಸುವಿನ ಪ್ರಾಣ ಉಳಿಸಿದ್ದಾರೆ.

ಇದೇ ವೇಳೆ ರೈತ ಬಾಂಧವರಲ್ಲಿ ವಿನಂತಿ ಮಾಡಿಕೊಂಡ ವೈದ್ಯರ ತಂಡ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ,ಬಳಸಿದ ಪ್ಲಾಸ್ಟಿಕ್ ನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಹೀಗೆ ಎಲ್ಲೆಂದರಲ್ಲಿ ಬಿಸಾಡುವುದರಿಂದ ಪರಿಸರ ಮಾಲಿನ್ಯವಲ್ಲದೇ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವೈದ್ಯರು ಗ್ರಾಮಸ್ಥರಿಗೆ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಹಸುವಿನ ಪ್ರಾಣ ಉಳಿಸಿದ ಪಶುವೈದ್ಯರ ತಂಡಕ್ಕೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

26/11/2020 05:34 pm

Cinque Terre

28.62 K

Cinque Terre

11

ಸಂಬಂಧಿತ ಸುದ್ದಿ