ಕುಂದಗೋಳ : ಸತತ ಎರೆಡು ವರ್ಷದಿಂದ ಕಾಡುತ್ತಿರುವ ಅತಿವೃಷ್ಠಿಗೆ ಅನ್ನದಾತನ ಪಾಡು ಅಧೋಗತಿಗೆ ಸೇರಿದ್ದು ಸಾಲ ಮಾಡಿ ಭೂಮಿಗೆ ಬಿತ್ತಿದ ಬೆಳೆ ಹಾಳಾಗಿ ಹೋಗಿ ಲಾಭದ ಮಾತು ಮರೆಯಾಗಿದೆ.
ಈಗಾಗಲೇ ಶೇಂಗಾ, ಹತ್ತಿ ಬೆಳೆಗಳಲ್ಲಿ ವಿಪರೀತ ಇಳುವರಿಯನ್ನು ಕಳೆದುಕೊಂಡಿರುವ ರೈತ ಸದ್ಯದ ಪರಿಸ್ಥಿತಿಯಲ್ಲಿ ತಾನೇ ಬೆಳೆಸಿದ ಮೆಣಸಿನಕಾಯಿ ಗಿಡಗಳನ್ನು ಹರಗಿಸಿ ಕಿತ್ತೋಗೆದು ಹಿಂಗಾರು ಬಿತ್ತನೆಗಾಗಿ ಭೂಮಿಯನ್ನ ಮತ್ತೆ ಹದಗೊಳಿಸುತ್ತಿದ್ದಾನೆ.
ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಬಸವರಾಜ ಯೋಗಪ್ಪನವರ ಎಂಬ ರೈತ ನಾಲ್ಕು ಎಕರೆ ಹೊಲದಲ್ಲಿ ಮೆಣಸಿನ ಗಿಡ ಬೆಳೆಸಿದ್ದು ಅತಿವೃಷ್ಟಿ ಹೊಡೆತಕ್ಕೆ ಸಿಲುಕಿದ ಬೆಳೆಗಳು ಇಳುವರಿ ಕಳೆದುಕೊಂಡಿದ್ದು ಹೊಲದ ತುಂಬೆಲ್ಲಾ ಹುಲ್ಲು ಕಸ ಬೆಳೆದಿದೆ ಹೀಗಾಗಿ ರೂಟರ್ ಮೂಲಕ ಇಡೀ ಹೊಲವನ್ನೇ ಹರಗಿಸಿ ಕೈ ಬಿಟ್ಟಿದ್ದು ಹಿಂಗಾರಿನ ಮೇಲೆ ಭರವಸೆ ಹೊತ್ತು ಕುಳಿತು ಸರ್ಕಾರ ನೀಡುವ ಪರಿಹಾರ ಬೆಳೆವಿಮೆಗೆ ಕಾಯುತ್ತಿದ್ದಾನೆ.
ಒಟ್ಟಾರೆ ಕುಂದಗೋಳ ತಾಲೂಕು ಮೆಣಸಿನಕಾಯಿ ಬೆಳೆ ಬೆಳೆಯುಲ್ಲಿ ಮುಂಚೂಣಿಯಲ್ಲಿದ್ದು ಈಗ ಅದು ಹಾಳಾದಂತಾಗಿದೆ.
Kshetra Samachara
29/10/2020 05:58 pm