ಹುಬ್ಬಳ್ಳಿ: ರೈತರಿಗೆ ಒಂದು ಗುಡ್ ನ್ಯೂಸ್ ಇನ್ನೂ ಮುಂದೆ ಮಣ್ಣು ಪರೀಕ್ಷೆಗಾಗಿ ಕಾಯಬೇಕಿಲ್ಲ ಕೇವಲ 30 ನಿಮಿಷಗಳಲ್ಲಿ ಮಣ್ಣು ಪರೀಕ್ಷೆ ಫಲಿತಾಂಶ ಕೈ ಸೇರಲಿದೆ.
ಹೌದು ಹುಬ್ಬಳ್ಳಿ ಮೂಲದ ದೇಶಪಾಂಡೆ ಸ್ಟಾರ್ಟ್ ಅಪ್ ಫೌಂಡೇಶನ್ ನಲ್ಲಿ incubation ಆಗಿರುವ ಸ್ಟಾರ್ಟ್ ಅಪ್ ಕಂಪನಿವೊಂದು ಹೊಸ ಆವಿಸ್ಕಾರವೊಂದನ್ನು ಪರಿಚಯಿಸಿದ ಸ್ಟಾರ್ಟ್ ಅಪ್ ಅಗ್ರಿಟೆಕ್ ಕೇಂದ್ರೀಕೃತ ಹೂಡಿಕೆದಾರರಿಗೆ ಬರೊಬ್ಬರಿ 8 ಕೋಟಿ ರೂಪಾಯಿ ಹೂಡಿಕೆ ಆಕರ್ಷಿಸಿದೆ.
ಹೊಸದಾಗಿ ಪ್ರಾರಂಭವಾಗಿರುವ ಈ ಕಂಪನಿಯಿಂದ ರೈತರು ಕೇವಲ 30 ನಿಮಿಷಗಳಲ್ಲಿ ತಮ್ಮ ಕೃಷಿ ಭೂಮಿಯ ಮಣ್ಣಿನ ಪರೀಕ್ಷೆ ನಡೆಸಬಹುದಾಗಿದ್ದು, ಫಲಿತಾಂಶದ ವಿವರಗಳನ್ನು ಅವರ ಮೊಬೈಲ್ ಗೇ ಕಳಿಸಲಾಗುತ್ತದೆ.
ಕೃಷಿ ಮಾಡುವವರ ಸಂಖ್ಯೆ 30 ಕೋಟಿ ಇದ್ದು, ದೇಶಾದ್ಯಂತ 4000 ಮಣ್ಣು ಪರೀಕ್ಷಾ ಲ್ಯಾಬರೇಟರಿಗಳಿವೆಯಷ್ಟೇ.
ಇದರಿಂದಾಗಿ ಸಾಕಷ್ಟು ಅಸಮತೋಲನ ಉಂಟಾಗಿ ರೈತರಿಗೆ ಉಪಯೋಗವಾಗುತ್ತಿಲ್ಲ.
ಉಡುಪಿಯಲ್ಲಿ ಸಂದೀಪ್ ಕೊಂಡಾಜಿ ಎಂಬುವವರು ಕೃಷಿ ತಂತ್ರ ಎಂಬ ಸ್ಟಾರ್ಟ್ ಅಪ್ ಪ್ರಾರಂಭಿಸಿದ್ದು ಕೃಷಿ ರಾಸ್ತಾ ಎಂಬ ಕ್ಷಿಪ್ರ ಮಣ್ಣು ಪ್ರಯೋಗ ವಿಧಾನವನ್ನು ಪರಿಚಯಿಸಿದ್ದಾರೆ.
ಇದರಿಂದಾಗಿ ಗೊಬ್ಬರದ ಪ್ರಮಾಣವನ್ನು ಅಗತ್ಯಕ್ಕೆ ತಕ್ಕಂತೆ ಹಾಕುವುದರಿಂದ ಕೃಷಿಕರು ಶೇ.15-25 ರಷ್ಟು ಹಣವನ್ನು ಉಳಿತಾಯ ಮಾಡಬಹುದಾಗಿದೆ ಎಂದಿದ್ದಾರೆ ಸಂದೀಪ್
Kshetra Samachara
14/10/2020 10:58 pm