ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ :ಟ್ರ್ಯಾಕ್ಟರ್ ತೊಳೆಯಲು ಹೋಗಿ ಹಳ್ಳದಲ್ಲಿ ಸಿಲುಕಿದ ಯುವಕ

ನವಲಗುಂದ : ಕಳೆದೆರಡು ದಿನಗಳಿಂದ ಸುರಿದ ಮಳೆ ತುಪ್ಪರಿ ಹಳ್ಳ ಉಕ್ಕಿ ಹರಿಯುತ್ತಿದ್ದು, ಯುವಕನೊಬ್ಬ ಟ್ರ್ಯಾಕ್ಟರ್ ತೊಳೆಯಲು ಹೋದ ವೇಳೆ ಟ್ರ್ಯಾಕ್ಟರ್ ಸಮೇತ ಹಳ್ಳದಲ್ಲಿ ಸಿಲುಕಿ ಪರದಾಟ ನಡೆಸಿದ ಘಟನೆ ನಡೆದಿದೆ. ಯುವಕ ಈಜಿ ದಡ ಸೇರಿದ್ದು, ನಂತರ ಗ್ರಾಮಸ್ಥರ ಸಹಾಯದಿಂದ ಜೆಸಿಬಿ ಮೂಲಕ ಟ್ರ್ಯಾಕ್ಟರ್ ಹೊರ ತೆಗೆಯಲಾಗಿದೆ.

ನವಲಗುಂದ ತಾಲ್ಲೂಕಿನ ಶಿರಕೋಳ ಗ್ರಾಮದಿಂದ ಹಣಸಿ ಗ್ರಾಮದ ಕಡೆಗೆ ತೆರಳುವ ರಸ್ತೆಯ ಕಿರು ಸೇತುವೆ ಮೇಲೆ ನಡೆದ ಘಟನೆ ಇದಾಗಿದ್ದು, ಟ್ರ್ಯಾಕ್ಟರ್ ತೊಳೆಯಲು ಹೋದ ಸಂದರ್ಭದಲ್ಲಿ ಬ್ರೇಕ್ ಹತ್ತದ ಕಾರಣದಿಂದ ಟ್ರ್ಯಾಕ್ಟರ್ ನಡು ಹಳ್ಳಕ್ಕೆ ಇಳಿದಿದೆ ಎನ್ನಲಾಗಿದೆ. ಇನ್ನು ಅವಘಡಕ್ಕೆ ಸಿಲುಕಿದ ವ್ಯಕ್ತಿಯನ್ನು ಶಿರಕೋಳ ಗ್ರಾಮದ ಕಲ್ಲಪ್ಪ ಬನದುರ್ಬಿ ಎಂದು ಹೇಳಲಾಗಿದೆ.

ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಯಿಂದ ಶಿರಕೋಳ ಸೇರಿದಂತೆ ಅಕ್ಕ ಪಕ್ಕದ ಗ್ರಾಮದ ಜನರು ಜಮಾಯಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

03/10/2022 04:52 pm

Cinque Terre

54.47 K

Cinque Terre

1

ಸಂಬಂಧಿತ ಸುದ್ದಿ