ಹುಬ್ಬಳ್ಳಿ: ನಗರದ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಫ್ಯಾಕ್ಟರಿಯಲ್ಲಿ ನಡೆದ ಬೆಂಕಿ ಅವಘಡದಲ್ಲಿ, ತೀವ್ರವಾಗಿ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಇಂದು ಕಿಮ್ಸನಲ್ಲಿ ಸಾವಿಗೀಡಾಗಿದ್ದು, ಈ ಮೂಲಕ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ನಾಲ್ಕಕ್ಕೇರಿದೆ.
ತಾರಿಹಾಳದ ಸ್ಪಾರ್ಕರ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡದಲ್ಲಿ ಇಬ್ಬರು ಮಹಿಳೆಯರು ಹಾಗೂ 18 ವರ್ಷದ ಯುವಕನೋರ್ವ ಘಟನೆ ನಡೆದ 12 ಗಂಟೆಯಲ್ಲಿಯೇ ಸಾವಿಗೀಡಾಗಿದ್ದಾರೆ. ಇಂದು ಬೆಳಗಿನ ಜಾವ ಮಲೀಕ್ ಕೊಪ್ಪದ ಎಂಬ 18 ವರ್ಷದ ಯುವಕ ಸಾವಿಗೀಡಾಗಿದ್ದಾನೆ.
ಘಟನೆಯ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಗ್ರಾಮೀಣ ಠಾಣೆ ಇನ್ಸ್‌ಪೆಕ್ಟರ್ ರಮೇಶ್‌ಗೋಕಾಕ ಅವರು, ಇದುವರೆಗೆ ಮಾಲೀಕನ ಬಂಧನ ಮಾಡದೇ ಇರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
Kshetra Samachara
29/07/2022 02:32 pm