ನವಲಗುಂದ : ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಕಾಲವಾಡ ಹಾಗೂ ಕರ್ಲವಾಡ ಗ್ರಾಮಗಳ ಮಧ್ಯೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹೃದಯಘಾತವಾಗಿ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಪಟ್ಟಿದ್ದಾನೆ.
ಮೃತ ವ್ಯಕ್ತಿಯನ್ನು ಹಾವೇರಿ ಜಿಲ್ಲೆಯ ಕಾಕೋಳ ಗ್ರಾಮದ 28 ವರ್ಷ ವಯಸ್ಸಿನ ಲೋಕನಾಥ್ ಉಮೇಶ್ ಗುತ್ತಲ ಎನ್ನಲಾಗಿದ್ದು, ನವಲಗುಂದ ಜಿಲ್ಲಾ ಪಂಚಾಯತ್ ಇಂಜನೀಯರ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತ ದೇಹವನ್ನು ನವಲಗುಂದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ವ್ಯಕ್ತಿ ಹೃದಯಘಾತದಿಂದ ಮೃತ ಪಟ್ಟಿದ್ದಾನೆ ಎಂದು ವೈದ್ಯರಿಂದ ತಿಳಿದು ಬಂದಿದೆ.
Kshetra Samachara
11/07/2022 04:36 pm