ಧಾರವಾಡ: ಹುಬ್ಬಳ್ಳಿ-ಧಾರವಾಡ ಬೈಪಾಸ್ ನಲ್ಲಿ ಬೊಲೆರೋ ಗೂಡ್ಸ್ ಕ್ಯಾರಿಯರ್ ಪಲ್ಟಿ ಆಗಿದೆ. ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಕೂಡ ಜಖಂ ಆಗಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಹೀಂದ್ರಾ ಬೋಲೆರೋ ಗೂಡ್ಸ್ ಕ್ಯಾರಿಯರ್ ಸೊಪ್ಪು ತುಂಬಿಕೊಂಡು ಹೋಗ್ತಾಯಿತ್ತು. ಇದೇ ವೇಳೆ
ಗೂಡ್ಸ್ ಕ್ಯಾರಿಯರ್ ಟೈರ್ ಬ್ಲಾಸ್ಟ್ ಆಗಿದ್ದು, ಇದರ ಪರಿಣಾಮ ಎದುರಿಗೆ ಬರ್ತಿದ್ದ ಬೈಕ್ ಗುದ್ದಿ ಬೊಲೆರೋ ಪಲ್ಟಿಯಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನ ನಿರೀಕ್ಷಿಸಲಾಗುತ್ತಿದೆ.
Kshetra Samachara
26/06/2022 08:08 pm