ನವಲಗುಂದ : ನವಲಗುಂದ ಪಟ್ಟಣದ ಹೊರವಲಯದಲ್ಲಿರುವ ಇಬ್ರಾಹಿಂಪುರ ರಸ್ತೆಯ ಪುರಸಭೆಯ ಕಸ ಸಂಗ್ರಹ ಕೇಂದ್ರದಲ್ಲಿ ಕೆಲಸಮಾಡುತ್ತಿದ್ದ ವೇಳೆ ಕಾರ್ಮಿಕನೊಬ್ಬ ನೀರಿನ ಟ್ಯಾಂಕ್ ನಲ್ಲಿ ಕಾಲು ಜಾರಿ ಬಿದ್ದು, ಮೃತ ಪಟ್ಟಿದ್ದಾನೆ ಎನ್ನಲಾಗಿದೆ.
ಹೌದು ಟೆಂಡರ್ ಬೇಸ್ ನಲ್ಲಿ ಪುರಸಭೆಯ ಕಸ ಸಂಗ್ರಹ ಕೇಂದ್ರದಲ್ಲಿ ಕೆಲಸಮಾಡುತ್ತಿದ್ದ ವ್ಯಕ್ತಿ ಇಂದು ಮಧ್ಯಾಹ್ನ ನೀರಿನ ಟ್ಯಾಂಕ್ ನಲ್ಲಿ ಕಾಲು ಜಾರಿ ಬಿದ್ದು ಸ್ಥಳಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಇನ್ನು ಮೃತ ದುರ್ದೈವಿಯನ್ನು 40 ವರ್ಷ ವಯಸ್ಸಿನ ಗೂಡುಸಾಬ ಮಾಬುಸಾಬ ಶಿರೂರು ಎಂದು ತಿಳಿದು ಬಂದಿದೆ. ಘಟನೆ ನವಲಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
Kshetra Samachara
21/05/2022 04:51 pm