ಧಾರವಾಡ: ಧಾರವಾಡದಿಂದ ಯಾದವಾಡ ಗ್ರಾಮದ ಕಡೆಗೆ ಹೊರಟಿದ್ದ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾದ ಘಟನೆ ಧಾರವಾಡ ತಾಲೂಕಿನ ದಾಸನಕೊಪ್ಪ ಗ್ರಾಮದ ಬಳಿ ಸಂಭವಿಸಿದೆ.
ಗಾಯಗೊಂಡವರನ್ನು ಯಾದವಾಡ ಗ್ರಾಮದ ಬೀಬಿಜಾನ್ ಹಾಗೂ ಅವರ ಅಳಿಯ ಎಂದು ಗುರುತಿಸಲಾಗಿದೆ. ಸ್ಕಿಡ್ ಆಗಿ ಬಿದ್ದ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Kshetra Samachara
10/05/2022 07:59 pm