ಹುಬ್ಬಳ್ಳಿ: ಬಸವಜಯಂತಿ ಹಿನ್ನೆಲೆಯಲ್ಲಿ ಎತ್ತುಗಳ ಮೆರವಣಿಗೆ ವೇಳೆ ಎತ್ತೊಂದು ನೆರೆದ ಜನರನ್ನು ನೋಡಿ ಬೆದರಿ ಅಲ್ಲೆ ಪಕ್ಕದಲ್ಲಿದ್ದ ಬಾವಿಗೆ ಹಾರಿದ ಘಟನೆ ನಡೆದಿದೆ.
ನಿನ್ನೆ ಹುಬ್ಬಳ್ಳಿಯ ಮಂಗಳವಾರ ಪೇಟೆಯಲ್ಲಿ ಬಸವ ಜಯಂತಿಯ ನಿಮಿತ್ತ ಎತ್ತಿನ ಮೆರವಣಿಗೆ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ ಎತ್ತು ಜನ ಜಂಗುಳಿಗೆ ಹೆದರಿ ಮಾಲೀಕನ ಹಿಡಿತಕ್ಕೆ ಸಿಗದೆ ಓಡುವ ರಭಸದಲ್ಲಿ ಖಾಲಿ ಜಾಗದಲ್ಲಿ ಇದ್ದ ಬಾವಿಗೆ ಬಿದ್ದು ಕೆಲ ಸಮಯ ಆತಂಕ ಸೃಷ್ಟಿಯಾಗಿತ್ತು.
ಅಗ್ನಿಶಾಮಕ ದಳದ ಸಿಬ್ಬಂದಿ ಕ್ರೇನ್ ಮುಖಾಂತರ, ಸಾರ್ವಜನಿಕರ ಸಹಾಯದೊಂದಿಗೆ ಹರಸಾಹಸಪಟ್ಟು ಎತ್ತನ್ನು ಮೇಲಕ್ಕೆ ಎತ್ತಿದರು. ಮೇಲೆ ಬಂದ ಮೇಲೂ ಎತ್ತು ಸಮಾಧಾನವಾಗದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ಎತ್ತನ್ನು ಹತೋಟಿಗೆ ತಂದು ಎತ್ತನು ಕಟ್ಟಿ ಹಾಕಲು ಯಶಸ್ವಿ ಯಾದರು.
Kshetra Samachara
04/05/2022 10:54 am