ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಇಪ್ತಿಯಾರ ಕೂಟದಲ್ಲಿ ಅವಘಡ, ಇಬ್ಬರಿಗೆ ಗಾಯ

ನವಲಗುಂದ : ನವಲಗುಂದ ಪಟ್ಟಣದಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಇಪ್ತಿಯಾರ್ ಕೂಟದಲ್ಲಿ ಭಾಗಿಯಾದ ಇಬ್ಬರ ಮೇಲೆ ದಾಲ್ಚಾ ಬಿದ್ದ ಹಿನ್ನೆಲೆ ಇಬ್ಬರಿಗೂ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಭಾರತೀಯ ಜನತಾ ಪಾರ್ಟಿ ನವಲಗುಂದ ನಗರ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ರಂಜಾನ್ ಹಬ್ಬದ ಅಂಗವಾಗಿ ಇಪ್ತಿಯಾರ್ ಕೂಟವನ್ನು ಪಟ್ಟಣದ ಶಾದಿ ಮಹಲ್ ನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ದಾವಲ್ ಸಾಬ್ ಅಲ್ಲಿಬಾಯಿ ಹಾಗೂ ಮೌಲಾ ಸಾಬ್ ಧಾರವಾಡ ಎಂಬುವವರ ಮೈ ಮೇಲೆ ಊಟ ನೀಡುವ ವೇಳೆ ದಾಲ್ಚಾ ಬಿದ್ದ ಹಿನ್ನೆಲೆ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಇನ್ನು ಗಾಯಾಳುಗಳನ್ನು ನವಲಗುಂದ ತಾಲೂಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ನವಲಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

Edited By : Nagesh Gaonkar
Kshetra Samachara

Kshetra Samachara

01/05/2022 10:09 pm

Cinque Terre

66.13 K

Cinque Terre

23

ಸಂಬಂಧಿತ ಸುದ್ದಿ