ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ನಾಯಿಗಳ ದಾಳಿಗೆ ಬಲಿಯಾದ ಬಾಲಕ

ಧಾರವಾಡ: ನಾಯಿಗಳು ದಾಳಿ ನಡೆಸಿದ ಪರಿಣಾಮ 11 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ನವಲೂರು ರೈಲ್ವೆ ಗೇಟ್ ಬಳಿ ನಡೆದಿದೆ. ಪ್ರಥಮ ನೀರಲಕಟ್ಟಿ (11) ಎಂಬ ಬಾಲಕನೇ ಸಾವಿಗೀಡಾದ ದುರ್ದೈವಿ. ದುಮ್ಮವಾಡ ಗ್ರಾಮದಿಂದ ರಜೆಗೆಂದು ನವಲೂರಿಗೆ ಬಂದಿದ್ದ ಈ ಬಾಲಕ, ತನ್ಮ ಅಜ್ಜನಿಗೆ ಊಟ ಕೊಡಲೆಂದು ತೋಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ನಾಯಿಗಳ ಹಿಂಡು ದಾಳಿ ನಡೆಸಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಬಾಲಕ ಅಸುನೀಗಿದ್ದಾನೆ. ಈ ಹಿಂದೆ ಇದೇ ಜಾಗದಲ್ಲಿ ಓರ್ವ ಯುವಕ ಇದೇ ನಾಯಿಗಳ ದಾಳಿಗೆ ಬಲಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Edited By : Nirmala Aralikatti
Kshetra Samachara

Kshetra Samachara

28/04/2022 02:32 pm

Cinque Terre

40.61 K

Cinque Terre

8

ಸಂಬಂಧಿತ ಸುದ್ದಿ