ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಬೈಕ್ ಅಪಘಾತದಲ್ಲಿ ತಾಯಿ-ಮಗ ಬಲಿ

ಅಣ್ಣಿಗೇರಿ: ರಾಷ್ಟ್ರೀಯ ದಾರಿ ಹುಬ್ಬಳ್ಳಿ ಗದಗ ಮಾರ್ಗ ಮಧ್ಯೆ ಬರುವ ದುಂದೂರು ಕ್ರಾಸ್ ಸಮೀಪ ಅಪಘಾತದಲ್ಲಿ ತಾಯಿ- ಮಗ ಇಬ್ಬರೂ ಸಾವಿಗೀಡಾಗುತ್ತಾರೆ.

ನಿನ್ನೆ ರಾತ್ರಿ 7:00 ರಿಂದ 8ಗಂಟೆಯ ಸುಮಾರಿಗೆ ಸಂಬಂಧಿಕರ ಮದುವೆ ಮುಗಿಸಿಕೊಂಡು ಗದಗ ಮಾರ್ಗದಿಂದ ಹುಬ್ಬಳ್ಳಿ ಮಾರ್ಗವಾಗಿ ಬೈಕ್ ಮೇಲೆ ಬರುತ್ತಿದ್ದ ಅಭಿಷೇಕ್ ಸಂಗಣ್ಣನವರ ಹಾಗೂ ಈರವ್ವ ಸಂಗಣ್ಣವರ್ ಎಂಬುವವರು ದುಂದುರ್ ಕ್ರಾಸ್ ಸಮೀಪ ಅತಿಯಾದ ಮಳೆಯಾಗಿದ್ದರಿಂದ ಆಕಸ್ಮಿಕವಾಗಿ ಬೈಕ್ ಸ್ಕಿಡ್ ಆಗಿ ಬಿದ್ದಿದ್ದು, ಆಗ ಇಬ್ಬರು ಬೈಕನ್ನು ರೋಡಿನ ಆಚೆ ನಿಲ್ಲಿಸಿ ಮಳೆಯಿಂದ ರಕ್ಷಿಸಿಕೊಳ್ಳಲು ಸಮೀಪದ ಕಟ್ಟಡದ ಕಡೆ ನಿಲ್ಲಲು ಅಂತಾ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ ಅನಾಮಧೇಯ ಗಾಡಿಯೊಂದು ಡಿಕ್ಕಿ ಹೊಡೆದು ಹೋಗಿರುತ್ತದೆ. ಇನ್ನು ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುತ್ತಾರೆ.

ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

26/04/2022 05:22 pm

Cinque Terre

30.98 K

Cinque Terre

7

ಸಂಬಂಧಿತ ಸುದ್ದಿ