ಧಾರವಾಡ: ಧಾರವಾಡ ಬೇಲೂರ ಕೈಗಾರಿಕಾ ಪ್ರದೇಶದಲ್ಲಿ ಬೆಳಿಗ್ಗೆ ಎರಡು ವಾಹನಗಳ ಮಧ್ಯೆ ರಸ್ತೆ ಅಪಘಾತ ಸಂಭವಿಸಿ ಹರಿಯಾಣ ಮೂಲದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕಾರು ಹಾಗೂ ಖಾಸಗಿ ಬಸ್‌ಗಳ ಮಧ್ಯೆ ಈ ಅಪಘಾತ ಸಂಬಂಧಿಸಿದ್ದು, ಕಾರಿನಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಅಸುನಿಗಿದ್ದಾನೆ. ಅಪಘಾತವಾದ ಕೂಡಲೇ ಖಾಸಗಿ ಬಸ್ ಚಾಲಕ ಪರಾರಿಯಾಗಿದ್ದಾನೆ. ವಿಷಯ ತಿಳಿದ ತಕ್ಷಣ ಗರಗ ಠಾಣೆ ಪಿಎಸ್‌ಐ ಕಿರಣ ಮೋಹಿತೆ, ಇನ್‌ಸ್ಪೆಕ್ಟರ್ ಎಸ್.ಸಿ ಪಾಟೀಲ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Kshetra Samachara
14/03/2022 12:51 pm