ಹುಬ್ಬಳ್ಳಿ: ಕಿಡಿಗೇಡಿಗಳು ಕಸಕ್ಕೆ ಬೆಂಕಿ ಹಚ್ಚಿದ ಪರಿಣಾಮ ಕೆಲ ಕಾಲ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದ ಘಟನೆ
ನಗರದ ಕೊಪ್ಪಿಕರ ರಸ್ತೆ ಬ್ರಾಡ್ವೇ ಪಕ್ಕದ ನಾಲಾದಲ್ಲಿ ನಡೆದಿದೆ.
ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟರು. ಹೊತ್ತಿ ಉರಿಯುತ್ತಿದ್ದ ಕಸದ ಬೆಂಕಿಯನ್ನು ನಂದಿಸಿ ಅನಾಹುತ ತಪ್ಪಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
Kshetra Samachara
02/03/2022 05:46 pm