ಹುಬ್ಬಳ್ಳಿ: ಕೆಎಂಎಫ್ ಕಡೆಗೆ ಹೊರಟಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಬಿಆರ್‌ಟಿಎಸ್ ಬ್ಯಾರಿಕೇಡ್‌ಗೆ ಗುದ್ದಿದೆ. ಈ ಘಟನೆ ಇಂದು ಬೆಳ್ಳಂಬೆಳಗ್ಗೆ ಹುಬ್ಬಳ್ಳಿಯ ಶ್ರೀನಗರ ಕ್ರಾಸ್ ಉಣಕಲ್ ಬಳಿ ನಡೆದಿದೆ.
ಈ ಲಾರಿ ತಮಿಳುನಾಡಿನಿಂದ ಹುಬ್ಬಳ್ಳಿಯ ಕೆಎಂಎಫ್‌ಗೆ ಹೊರಟಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ಕಾಟನ್ ಮಾರ್ಕೆಟ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Kshetra Samachara
15/02/2022 09:27 am