ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ದಿಬ್ಬಣಕ್ಕೆ ಹೊರಟಿದ್ದ ಜೀಪ ಪಲ್ಟಿ: ಹಲವರಿಗೆ ಗಾಯ

ಧಾರವಾಡ: ಬೈಲಹೊಂಗಲ ಕಡೆಯಿಂದ ಧಾರವಾಡ ತಾಲೂಕಿನ ಯಾದವಾಡ ಕಡೆಗೆ ಬರುತ್ತಿದ್ದ ದಿಬ್ಬಣದ ಜೀಪು ಪಲ್ಟಿಯಾಗಿ ಹಲವರು ಗಾಯಗೊಂಡಿರುವ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಬಳಿ ನಡೆದಿದೆ.

ಯಾದವಾಡ ಗ್ರಾಮದಲ್ಲಿ ನಡೆಯುತ್ತಿದ್ದ ಸೀಮಂತ ಕಾರ್ಯಕ್ರಮಕ್ಕೆಂದು ಈ ಜೀಪು ಬರುತ್ತಿತ್ತು. ಈ ವೇಳೆ ವಾಹನದ ಬ್ರೇಕ್ ಫೇಲ್ ಆಗಿ ರಸ್ತೆ ಬದಿ ಪಲ್ಟಿಯಾಗಿದೆ. ಇದರಿಂದ ವಾಹನದಲ್ಲಿದ್ದ ಅನೇಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆಲ್ಲ ಉಪ್ಪಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Edited By : Nagesh Gaonkar
Kshetra Samachara

Kshetra Samachara

22/01/2022 09:58 pm

Cinque Terre

106.34 K

Cinque Terre

2

ಸಂಬಂಧಿತ ಸುದ್ದಿ