ನವಲಗುಂದ: ನರಗುಂದ ಕಡೆಗೆ ಕಬ್ಬು ಹೊತ್ತು ಹೊರಟಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನೆಲಕ್ಕೂರುಳಿದ ಘಟನೆ ಗುರುವಾರ ನವಲಗುಂದ ನಗರದ ಹೊರ ವಲಯದಲ್ಲಿ ಸಂಭವಿಸಿದೆ.
ನವಲಗುಂದ ಪಟ್ಟಣದಿಂದ ಸುಮಾರು ಒಂದು ಕಿಲೋಮೀಟರ್ ಗಳಷ್ಟು ದೂರ ಇರುವ ಶಲವಡಿ ಕ್ರಾಸ್ ಬಳಿ ಕಬ್ಬು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನೆಲಕ್ಕೆ ಉರುಳಿದೆ. ಇನ್ನು ಘಟನೆಯಲ್ಲಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಪ್ರಾಣ ಹಾನಿಗಿಲ್ಲ ಎಂದು ತಿಳಿದು ಬಂದಿದೆ.
Kshetra Samachara
13/01/2022 05:27 pm