ಕುಂದಗೋಳ : ರಸ್ತೆ ತಿರುವಿನಲ್ಲಿ ಚಲಿಸುತ್ತಿದ್ದ ಸ್ಕೂಟರ್ ಒಂದು ತಿರುವು ಇದೆ ಎಂಬುದನ್ನು ತಿಳಿಯದೇ ಚಾಲಕನ ನಿಯಂತ್ರಣ ತಪ್ಪಿ ನೀರು ತುಂಬಿದ ತಗ್ಗಿಗೆ ಬಿದ್ದು ವಾಹನ ಸವಾರರಿಗೆ ಗಾಯಗಳಾದ ಘಟನೆ ಹಂಚಿನಾಳ ಬಳಿ ಗಂಗಯ್ಯಜ್ಜನ ಮಠದ ಕ್ರಾಸ್ ಬಳಿ ಸಂಭವಿಸಿದೆ.
ಹೌದು ! ಹಂಚಿನಾಳ ಗಂಗಯ್ಯಜ್ಜನ ಮಠದ ಬಳಿ ಬಂದ ಸ್ಕೂಟರ್ ರಸ್ತೆ ತಿರುವು ತಿಳಿಯದೇ ತಗ್ಗಿದೆ ಬಿದ್ದಿದೆ, ತಕ್ಷಣ ವಾಹನ ತಗ್ಗಿಗೆ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ತಗ್ಗಿಗೆ ಬಿದ್ದ ಸ್ಕೂಟರ್ ಮೇಲೆತ್ತಿದ್ದಾರೆ.
ಈ ಮಾರ್ಗವಾಗಿ ರಸ್ತೆ ತಿರುವು ತಿಳಿಯದೇ, ಈ ತರಹ ಅಪಘಾತ ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಕೇವಲ ರಸ್ತೆ ಬದಿ ಕಲ್ಲು ಅಳವಡಿಸಿ ಕೈ ಬಿಟ್ಟಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರೀತಿ ಅಪಘಾತ ಸಂಭವಿಸುವ ಈ ರಸ್ತೆ ಸೂಕ್ತ ತಿರುವಿ ಇದೆ ನಾಮಫಲಕ ಹಾಗೂ ಸುರಕ್ಷತೆ ದೃಷ್ಟಿಯಿಂದ ಬೇರೆ ಕ್ರಮ ಜರುಗಿಸಬೇಕು ಎಂದು ವಾಹನ ಸವಾರರು ಒತ್ತಾಯ ಮಾಡಿದ್ದಾರೆ.
Kshetra Samachara
29/12/2021 08:06 am