ನವಲಗುಂದ : ಗದಗ ತೆರಳುತ್ತಿದ್ದ ಕಾರೊಂದು ಪಟ್ಟಣದ ನೀರಾವರಿ ಕಾಲೋನಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ರಸ್ತೆ ವಿಭಾಜಕಕ್ಕೆ ಗುದ್ದಿದ್ದು, ಅದೃಷ್ಟವಶಾತ್ ಕಾರಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೌದು ಪಟ್ಟಣದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ದಾರಿ ಕಾಣದಂತಾಗಿದ್ದೂ ಕೂಡ ದುರ್ಘಟನೆಗೆ ಕಾರಣ ಎನ್ನಬಹುದು. ಇನ್ನು ಕಾರಲ್ಲಿ ಗಂಡ ಹೆಂಡತಿ ಇದ್ದು, ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ. ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Kshetra Samachara
17/11/2021 08:53 pm