ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ-ಹಳಿಯಾಳ ರಸ್ತೆ ಮಧ್ಯೆ ಭೀಕರ ಅಪಘಾತ ಮೂವರ ದುರ್ಮರಣ

ಅಳ್ನಾವರ: ಹಳಿಯಾಳ-ಅಳ್ನಾವರ ರಸ್ತೆಯ ಮಧ್ಯೆ ಮದ್ನಳ್ಳಿ ಗ್ರಾಮದ ಬಳಿ ತಡ ರಾತ್ರಿ ಎರಡು ಬೈಕ್ ಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮವಾಗಿ ಮೂವರು ಸಾವನ್ನಪ್ಪಿದ್ದಾರೆ. ಮೃತರು ಅಳ್ನಾವರ ಪಟ್ಟಣದ ಕಾಶೆನಟ್ಟಿ ರಸ್ತೆಯ ರಮೇಶ ರಾವುತ್, ತೆರಗಾಂವ ಗ್ರಾಮದ ಕುಮಾರ ಮಿರಾಶಿ ಹಾಗೂ ಮಂಜು ಭೂಮಿ ಎಂಬುವವರಾಗಿದ್ದಾರೆ.

ಅಳ್ನಾವರ ಹಳಿಯಾಳ ಮಾರ್ಗದ ಮಧ್ಯೆ ಮದ್ನಳ್ಳಿ ಗ್ರಾಮದ ಹತ್ತಿರ ಎರಡು ಬೈಕ್ ಗಳು ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಹಾಗೂ ಮತ್ತೊಬ್ಬ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಬೈಕ್ ಸವಾರರು ಹೆಲ್ಮೆಟ್ ಧರಿಸಿರಲಿಲ್ಲ ಎಂಬುದು ತಿಳಿದು ಬಂದಿದ್ದು,ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

08/11/2021 01:21 pm

Cinque Terre

40.61 K

Cinque Terre

6

ಸಂಬಂಧಿತ ಸುದ್ದಿ