ಧಾರವಾಡ: ಧಾರವಾಡ ತಾಲೂಕಿನ ಲೋಕೂರು ಗ್ರಾಮದ ಕೃಷಿ ಜಮೀನಿನಲ್ಲಿ ಒಟ್ಟಲಾಗಿದ್ದ ಸೋಯಾಬಿನ್ ಬಣವೆಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಘಟನೆ ನಡೆದಿದೆ.
ಧಾರವಾಡದ ಕೆಲಗೇರಿಯ ನೇಮಿನಾಥ ಎಂಬುವವರಿಗೆ ಸೇರಿದ ಒಟ್ಟು 15 ಎಕರೆ ಪ್ರದೇಶದಲ್ಲಿ ಸೋಯಾಬಿನ್ ಬೆಳೆಯಲಾಗಿತ್ತು. ಕಟಾವು ಮಾಡಲಾದ ಸೋಯಾಬಿನ್ ಬಳ್ಳಿಯನ್ನು ಹೊಲದಲ್ಲೇ ಒಟ್ಟಲಾಗಿತ್ತು.
ಇಂದು ಏಕಾಏಕಿ ಕಿಡಿಗೇಡಿಗಳು ಆ ಬಣವೆಗೆ ಬೆಂಕಿ ಇಟ್ಟಿದ್ದಾರೆ. ಇದರಿಂದ ಬಣವೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅಪಾರ ಪ್ರಮಾಣದ ನಷ್ಟವಾದಂತಾಗಿದೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Kshetra Samachara
26/10/2021 09:46 pm