ಹುಬ್ಬಳ್ಳಿ: ಪೆಟ್ರೋಲ್ ಟ್ಯಾಂಕರ್ ಲಾರಿಗೆ ಬೈಕ್ ತಾಗಿದ ಪರಿಣಾಮವಾಗಿ ಮಹಿಳೆಯೊಬ್ಬರು ಲಾರಿ ಅಡಿಯಲ್ಲಿ ಸಿಲುಕಿದ್ದಾರೆ. ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಸವಾರನಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ನಗರದ ವಿದ್ಯಾನಗರದ ಕಾಡಸಿದ್ದೇಶ್ವರ ಕಾಲೇಜು ಎದುರಿಗೆ ನಡೆದಿದೆ.
ಹೌದು..ಹುಬ್ಬಳ್ಳಿಯಿಂದ ಧಾರವಾಡ ಕಡೆಗೆ ಸಾಗುತ್ತಿದ್ದ ಟ್ಯಾಂಕರ್ ಲಾರಿ ಮತ್ತು ಬೈಕ್ ಸವಾರರು, ಕಾಡಸಿದ್ದೇಶ್ವರ ಕಾಲೇಜು ಹತ್ತಿರ ಸಿಗ್ನಲ್ ಬಿದ್ದ ಕಾರಣ ನಿಧಾನವಾಗಿ ಸಾಗಿದ್ದಾರೆ. ಈ ವೇಳೆ ಬೈಕ್ ನ ಸ್ಟೇರಿಂಗ್ ಲಾರಿಗೆ ತಾಗಿದ ಪರಿಣಾಮ, ಬೈಕ್ ಲಾರಿಯಲ್ಲಿ ಸಿಲುಕಿದೆ. ಹಿಂಬದಿಯಲ್ಲಿದ್ದ ಮಹಿಳೆಯ ಮೇಲೆ ಲಾರಿಯ ಟಾಯರ್ ಹತ್ತಿ ಇಳಿದಿದ್ದು ಮುಂಬದಿಯ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ಇವರು ಯಾರು ಎಂಬುದು ತಿಳಿದು ಬಂದಿಲ್ಲ, ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿ ಗಾಯಗೊಂಡ ಮಹಿಳೆ ಮತ್ತು ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಕಾಟಾ ಮಾರ್ಕೆಟ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
26/10/2021 04:07 pm