ನವಲಗುಂದ : ತಾಲ್ಲೂಕಿನ ಯಮನೂರ ಗ್ರಾಮದ ಬೆಣ್ಣೆ ಹಳ್ಳದ ಬಳಿ ಹಾದು ಹೋಗುವ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು, ಟಿಪ್ಪರ್ ಮತ್ತು ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಹೌದು ಶುಕ್ರವಾರ ಸಂಜೆ ನಡೆದ ಘಟನೆಯಲ್ಲಿ ಕಾರು ಚಾಲಕನ ಅಜಾಗರೂಕ ಚಾಲನೆಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಟಿಪ್ಪರ್ ಹಾಗೂ ಲಾರಿ ಮಧ್ಯ ಸಿಲುಕಿದ ಕಾರಿನ ಮುಂಭಾಗ ಮತ್ತು ಹಿಂಬದಿ ಸಂಪೂರ್ಣ ಜಕಂ ಆಗಿದೆ. ಇನ್ನು ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Kshetra Samachara
10/09/2021 10:55 pm