ಧಾರವಾಡ: ಬೈಕ್ ಸವಾರನೋರ್ವ ಚಕ್ಕಡಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಸಾಯಿ ಅರಣ್ಯ ಹೋಟೆಲ್ ಹತ್ತಿರ ನಡೆದಿದೆ.
ಹುಬ್ಬಳ್ಳಿ ಮೂಲದ ಸಂತೋಷ್ ಎಂಬಾತನೇ ಈ ಘಟನೆಯಲ್ಲಿ ಸಾವನ್ನಪ್ಪಿದವನು.
ಬೈಕ್ ಹಾಗೂ ಚಕ್ಕಡಿ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಹೊಡೆತಕ್ಕೆ ಚಕ್ಕಡಿ ತುಂಡರಿಸಿದೆ. ಎತ್ತುಗಳಿಗೂ ಗಾಯವಾಗಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಮೃತ ಸಂತೋಷನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.
Kshetra Samachara
08/09/2021 08:39 pm