ದಾವಣಗೆರೆ: ನಗರದ ಹದಡಿಯಲ್ಲಿ ರಾತ್ರಿ ವೇಳೆ ಲಾರಿ ಹಲವು ವಾಹನಗಳಿಗೆ ಗುದ್ದಿ ಜಖಂ ಆದ ಘಟನೆ ನಡೆದಿದೆ.
ಆಂಧ್ರಪ್ರದೇಶ ಮೂಲದ ಲಾರಿ ಚಾಲಕ ಕಂಠಪೂರ್ತಿ ಮದ್ಯಪಾನ ಮಾಡಿದ್ದ. ಜೊತೆಗೆ ಕಂಡಕ್ಟರ್ ವಿಪರೀತವಾಗಿ ಕುಡಿದಿದ್ದ. ಚಾಲಕನ ಅಜಾಗರೂಕತೆಯಿಂದ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದ ಬಳಿಕ ಸಿಕ್ಕಿ ಹಾಕಿಕೊಂಡಿದೆ.
ಮಧ್ಯರಾತ್ರಿ ಒಂದೂವರೆ ವೇಳೆ ಈ ಘಟನೆ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ವಾಹನಗಳು ನುಜ್ಜುಗುಜ್ಜಾಗಿವೆ. ಓಮಿನಿಯಲ್ಲಿ ಮಲಗಿದ್ದ ಯುವಕನಿಗೆ ಗಾಯ ಕೂಡ ಆಗಿದೆ. ಮನೆಗೂ ಗುದ್ದಿರುವುದರಿಂದ ಮನೆಗೂ ಹಾನಿಯಾಗಿದೆ. ಮನೆ ಬಾಗಿಲು ಕೂಡ ಹಾಳಾಗಿದೆ.
ಪೂರ್ತಿ ನಿದ್ದೆಯಲ್ಲಿದ್ದೆ. ಇದ್ದಕ್ಕಿದ್ದಂತೆ ಸ್ಫೋಟದ ಶಬ್ಧ ಬಂತು. ನಾನು ಮನೆಗೆ ವಾಹನದಲ್ಲಿ ಮಲಗುತ್ತಿದ್ದೆ. ನಾನು ಸತ್ತು ಬದುಕಿ ಬಂದಿದ್ದೇನೆ ಎಂಬ ಅನುಭವ ಆಗಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಓಮ್ನಿ ವಾಹನದಲ್ಲೇ ನನ್ನ ದುಡಿಮೆ. ಈಗ ನುಜ್ಜುಗುಜ್ಜಾಗಿರುವ ಕಾರಣ ಹೊಸ ವಾಹನ ಕೊಡಿಸಬೇಕು. ಇಲ್ಲದಿದ್ದರೆ ಬದುಕುವುದೇ ಕಷ್ಟವಾಗುತ್ತದೆ'' ಎಂದು ಓಮ್ನಿಯಲ್ಲಿ ಮಲಗಿದ್ದ ಯುವಕ ಹೇಳಿದ್ದಾರೆ.
ಘಟನೆ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕ ಹಾಗೂ ಕಂಡಕ್ಟರ್ ಅನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
10/08/2021 12:08 pm