ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ! ಸುಟ್ಟು ಕರಕಲಾದ ಲಕ್ಷಾಂತರ ರೂ. ಪ್ಲಂಬಿಂಗ್ ವಸ್ತುಗಳು

ಹುಬ್ಬಳ್ಳಿ:ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಪ್ಲಂಬಿಂಗ್ ಅಂಗಡಿಯೊಂದಕ್ಕೆ ಬೆಂಕಿ ತಗುಲಿ, ಹೊತ್ತಿ ಉರಿದಿರುವ ಘಟನೆ, ನಗರದ ಕಾಟನ್ ಮಾರ್ಕೆಟ್ ನ ಜಯಪ್ರಕಾಶ್ ಹೊಟೇಲ್ ಎದುರಿನ ಶ್ರೀಧರ ಹೋಲ್ ಸೇಲ್ ಪೈಪ್ಸ್ ನಲ್ಲಿ ನಡೆದಿದೆ.

ಉದಯ ಕೋರೆ ಎಂಬುವವರಿಗೆ ಸೇರಿರುವ ಅಂಗಡಿಯಾಗಿದ್ದು, ನಸುಕಿನಜಾವ ಸುಮಾರು 3:30 ರ ವೇಳೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅರ್ಧ ಅಂಗಡಿ ಬೆಂಕಿಗೆ ಆಹುತಿಯಾಗಿವೆ. ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ವಸ್ತುಗಳು ಸುಟ್ಟು ಕರಕಲಾಗಿವೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
Kshetra Samachara

Kshetra Samachara

09/08/2021 11:19 am

Cinque Terre

43.02 K

Cinque Terre

0

ಸಂಬಂಧಿತ ಸುದ್ದಿ