ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ರಸ್ತೆ ಅಪಘಾತ 10 ಕುರಿ ಸಾವು : ಕಣ್ಣಿರಿಟ್ಟ ಕುರಿಗಾಯಿ

ಹುಬ್ಬಳ್ಳಿ: ರಸ್ತೆ ದಾಟುತ್ತಿದ್ದ ಕುರಿಗಳ ಮೇಲೆ ವಾಹನವೊಂದು ಹಾಯ್ದ ಘಟನೆ ಹುಬ್ಬಳ್ಳಿಯ ಹೊರವಲಯದ ವರೂರಿನ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಒಂದು ಬದಿಯಿಂದ ನೂರಾರು ಕುರಿಗಳೊಂದಿಗೆ ಕುರಿಗಾಯಿ ತಮ್ಮ ಕುರಿಗಳನ್ನು ದಾಟಿಸುತ್ತಿದ್ದರು. ಕೆಲವೊಂದಷ್ಟು ಕುರಿಗಳು ರಸ್ತೆಯ ಕೆಳಗಡೆಯ ಸೇತುವೆಯಲ್ಲಿ ಹೋದರೆ ಇನ್ನಷ್ಟು ಕುರಿಗಳು ಸೇತುವೆಯ ಮೇಲೆ ಹೆದ್ದಾರಿಯ ರಸ್ತೆಯಲ್ಲಿ ಹೊದವು.ರಸ್ತೆಯಲ್ಲಿ ದಾಟುತ್ತಿದ್ದ ಕುರಿಗಳನ್ನು ನೋಡದೆ ವಾಹನವೊಂದು ಏಕಾಏಕಿಯಾಗಿ ಕುರಿಗಳ ಮೆಲೆಯೇ ಹರಿದು ಹೋದ ಪರಿಣಾಮ ಹತ್ತಕ್ಕೂ ಹೆಚ್ಚು ಕುರಿಗಳು ಸಾವಿಗೀಡಾಗಿವೆ.

ಇನ್ನು ವರೂರಿನ ದೇವಪ್ಪ ಕೇಳಗಿನಮನಿ ಎಂಬುವರಿಗೆ ಸೇರಿದ ಕುರಿಗಳಾಗಿವೆ ರಸ್ತೆಯಲ್ಲಿ ದಾಟುತ್ತಿದ್ದ ಕುರಿಗಳ ಮೇಲೆ ವಾಹನ ಹಾಯ್ದಿದ್ದು ಎಲ್ಲೆಂದರಲ್ಲಿ ಹೆದ್ದಾರಿ ತುಂಬಾ ಕುರಿಗಳು ಸತ್ತು ಬಿದ್ದಿವೆ. ಈ ಕುರಿತು ಕುರಿಗಾಯಿ ದೂರು ನೀಡದ್ದು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

25/02/2021 11:11 am

Cinque Terre

31.21 K

Cinque Terre

1

ಸಂಬಂಧಿತ ಸುದ್ದಿ