ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಾರಿನ ಮೇಲೆ ಬಿದ್ದ ಮರ: ಗ್ಲಾಸು ಜಖಂ

ಧಾರವಾಡ: ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಬಳಿ ಇದ್ದ ಮರ ಕಾರೊಂದರ ಮೇಲೆ ಬಿದ್ದ ಪರಿಣಾಮ ಕಾರಿನ ಗ್ಲಾಸು ಜಖಂಗೊಂಡಿದೆ.

ಹುಬ್ಬಳ್ಳಿಯ ಎಸ್.ಅಭಿಜಿತ್ ಎಂಬುವವರಿಗೆ ಸೇರಿದ ಕಾರಿನ ಮೇಲೆಯೇ ಈ ಮರ ಉರುಳಿ ಬಿದ್ದಿದೆ. ಕಾರ್ಯ ನಿಮಿತ್ತ ಅಭಿಜಿತ್ ಅವರು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದರು. ತಮ್ಮ ಕಾರನ್ನು ಜಿಲ್ಲಾ ಪಂಚಾಯ್ತಿ ಕಂಪೌಂಡ್ ಬಳಿ ಪಾರ್ಕ್ ಮಾಡಿ ಹೋಗಿದ್ದರು. ಈ ವೇಳೆ ಗೆದ್ದಲು ಹಿಡಿದಿದ್ದ ಮರ ಕಾರಿನ ಮೇಲೆ ಉರುಳಿ ಬಿದ್ದಿದೆ.

ಇದರಿಂದಾಗಿ ಕಾರಿನ ಗ್ಲಾಸು ಜಖಂಗೊಂಡಿದ್ದು, ಪೊಲೀಸರ ಸಹಾಯದಿಂದ ಮರವನ್ನು ತೆಗೆಯಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

03/02/2021 11:08 pm

Cinque Terre

35.78 K

Cinque Terre

0

ಸಂಬಂಧಿತ ಸುದ್ದಿ