ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಎರಡು ಬೈಕ್ ಗಳಿಗೆ ಗುದ್ದಿದ ಕಾರು! ಇಬ್ಬರ ಸ್ಥಿತಿ ಗಂಭೀರ

ಹುಬ್ಬಳ್ಳಿ: ಕಾರು ಒಂದು ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ, ಮೂವರು ಗಾಯಗೊಂಡ ಇಬ್ಬರು ಸ್ಥಿತಿ ಚಿಂತಾಜನಕವಾಗಿರುವ ಘಟನೆ ಹುಬ್ಬಳ್ಳಿ ಗದಗ ರಸ್ತೆಯ, ಬಂಡಿವಾಡ ಗ್ರಾಮದ ಪುಟಾಣಿ ಮಿಲ್ ಹತ್ತಿರ ನಡೆದಿದೆ.

ಗದಗ ಕಡೆಗೆ ಹೊರಟಿದ್ದ ಕಾರು ಹುಬ್ಬಳ್ಳಿಯತ್ತ ಬರುತ್ತಿದ್ದ ಎರಡು ಬೈಕಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬಂಡಿವಾಡ ಗ್ರಾಮದ ವಿರುಪಾಕ್ಷಪ್ಪ ವಾಲಿ, ಹಿಂಬದಿ ಸವಾರ ಮಲ್ಲಪ್ಪ ಸುಣಗಾರ ಹಾಗೂ ಹುಬ್ಬಳ್ಳಿಯ ಮತ್ತೊಂದು ಬೈಕ್ ಚಾಲಕ ಮುಗಲಿಂದರ ಶರ್ಮಾ ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರಿಗೆ ತಲೆಗೆ ಪೆಟ್ಟಾಗಿದ್ದು, ಇನ್ನಿಬ್ಬರನ್ನು ಚಿಕಿತ್ಸೆಗಾಗಿ ಕಿಮ್ಸಗೆ ರವಾನೆ ಮಾಡಲಾಗಿದೆ. ಗದಗ ಮೂಲದ ಭಗೀರಥ ಹನಮಂತ ಮಗ್ಗಿ ಎಂಬಾತನೇ ಕಾರು ಚಾಲಕನಾಗಿದ್ದು, ಮೂರು ವಾಹಗನಗಳು ನಜ್ಜುಗುಜ್ಜಾಗಿವೆ.

ಘಟನೆಯಿಂದ ವಾಹನಗಳು ಎಲ್ಲೇಂದರಲ್ಲಿ ಬೀಳುವ ಜೊತೆಗೆ ಗಾಯಾಳುಗಳು ರಸ್ತೆಯ ಎಲ್ಲೆಂದರಲ್ಲಿ ಬಿದ್ದಿದ್ದರು. ತಕ್ಷಣವೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಗ್ರಾಮೀಣ ಠಾಣೆ ಪೊಲೀಸರು ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

03/02/2021 11:06 pm

Cinque Terre

62.62 K

Cinque Terre

0

ಸಂಬಂಧಿತ ಸುದ್ದಿ